ರಸ್ತೆ ವಿಸ್ತರಣೆಗೆ ಶೀಘ್ರ ಅನುದಾನ ಬಿಡುಗಡೆ

ಹೊನ್ನಾಳಿ: ಪಟ್ಟಣದ ರಸ್ತೆ ವಿಸ್ತರಣೆ ಸಮಯದಲ್ಲಿ ತಾಂತ್ರಿಕ ತೊಂದರೆಗಳಿಂದ ಆಂಜನೇಯ ಬೀದಿ ಮತ್ತು ಕುಂಬಾರ ಬೀದಿಗಳ ವಿಸ್ತರಣೆ ಸ್ಥಗಿತವಾಗಿದೆ. ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ನ್ಯಾಮತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮ ಹಿಂದಿನ ಅವಧಿಯಲ್ಲಿ ಕುಮಟಾ-ಕಾರಮಡಗಿ ಹೆದ್ದಾರಿ ಅಭಿವೃದ್ಧಿಗೆ 131 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಗುತ್ತಿಗೆದಾರರು ಕಾಮಗಾರಿ ಅಪೂರ್ಣ ಮಾಡಿರುವುದರಿಂದ ಸರ್ಕಾರದಿಂದ ಮತ್ತೆ ಅನುದಾನ ಬಿಡುಗಡೆ ಮಾಡಿಸಿ, ಸುಸಜ್ಜಿತ ರಸ್ತೆ ಮಾಡಿಸುತ್ತೇನೆ ಎಂದರು.

2019 ಜ.19ರಂದು ನಡೆಯಲಿರುವ ನೂತನ ನ್ಯಾಮತಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಈ ಸಂಬಂಧ ಜ.1ರಂದು ನ್ಯಾಮತಿ ತಾಲೂಕು ವ್ಯಾಪ್ತಿಯ ಜನಪ್ರತಿನಿಧಿಗಳು, ಕಸಾಪ ಸರ್ವ ಸದಸ್ಯರ ಪೂರ್ವಭಾವಿ ಸಭೆ ಕರೆಯುವಂತೆ ಕಸಾಪ ಪದಾಧಿಕಾರಿಗಳಿಗೆ ತಿಳಿಸಿದರು.

ಹೊನ್ನಾಳಿ ತಾಪಂ ಪ್ರಭಾರ ಅಧ್ಯಕ್ಷ ಎಸ್.ಪಿ.ರವಿಕುಮಾರ, ಗ್ರಾಪಂ ಅಧ್ಯಕ್ಷೆ ಎನ್.ಪಿ.ರೇಣುಕಮ್ಮ, ಕಸಾಪ ಅಧ್ಯಕ್ಷ ಗಡೆಕಟ್ಟೆ ನಿಜಲಿಂಗಪ್ಪ, ಪದಾಧಿಕಾರಿಗಳಾದ ಕೋಡಿಕೊಪ್ಪ ಬಸವರಾಜ, ಡಿ.ಎಂ.ವಿಜೇಂದ್ರ ಮಹೇಂದ್ರಕರ, ನಾಗರಾಜ ಅರ್ಕಾಚಾರ್ ಇದ್ದರು.