ಕೊಟ್ಟಿಗೆಗೆ ಬೆಂಕಿ, ಮೂರು ಜಾನುವಾರು ಸಾವು

ಹೊನ್ನಾಳಿ: ನ್ಯಾಮತಿ ಹೊರವಲಯದ ರೈತ ಮುನಿಯಪ್ಪರ ವೀರೇಶ್ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ಭಾನುವಾರ ತಡರಾತ್ರಿ ಬೆಂಕಿ ತಗುಲಿ, ಎತ್ತು, ಹಸು, ಕರು ಸಾವಿಗೀಡಾಗಿವೆ.

ಪಟ್ಟಣದ ದಾನಿಹಳ್ಳಿ ರಸ್ತೆಯ ಕೊಟ್ಟಿಗೆ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಧಾವಿಸಿದ ಹೊನ್ನಾಳಿ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ಕೊಟ್ಟಿಗೆಯಲ್ಲಿದ್ದ ಹಸು, ಎತ್ತು, ಕರು ಬೆಂಕಿಯಿಂದ ಸುಟ್ಟಿವೆ. ಅಂದಾಜು 5 ಲಕ್ಷ ರೂ. ನಷ್ಟವಾಗಿದೆ. ಪಶುಸಂಗೋಪನೆ, ಕಂದಾಯ ಇಲಾಖೆ ಸರ್ಕಾರಕ್ಕೆ ಜಂಟಿ ವರದಿ ನೀಡಬೇಕಿದೆ. ಇದನ್ನು ಆಧರಿಸಿ ಸರ್ಕಾರ ರೈತರಿಗೆ ಪರಿಹಾರ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಸಕರ ಭೇಟಿ: ಘಟನೆ ನಡೆದ ಸ್ಥಳವನ್ನು ಶಾಸಕ ಶಾಸಕ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ, ಶೀಘ್ರವೇ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ತಹಸೀಲ್ದಾರ್ ಮಹಮ್ಮದ್, ಉಪತಹಸೀಲ್ದಾರ್ ನಾಗರಾಜ, ಜಿಪಂ ಸದಸ್ಯ ಡಿ.ಜಿ.ವಿಶ್ವಾನಾಥ್, ತಾಪಂ ಸದಸ್ಯ ರವಿಕುಮಾರ್, ಮುಖಂಡರಾದ ವೀರಣ್ಣ, ಅಜಯ, ರವಿಕುಮಾರ್ ಇತರರಿದ್ದರು.