ಹೊನ್ನಾಳಿಯಲ್ಲಿ ರಥೋತ್ಸವ ಸಂಭ್ರಮ

ಹೊನ್ನಾಳಿ: ಪಟ್ಟಣದ ಗುರು ರಾಘವೇಂದ್ರಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 348ನೇ ಉತ್ತರಾಧನೆ ಹಾಗೂ ರಥೋತ್ಸವ ಭಾನುವಾರ ಜರುಗಿತು.

ಶ್ರೀ ಮನ್ಮದ್ವಾಚಾರ್ಯ ಮೂಲ ಸಂಸ್ಥಾನ ಕೂಡಲಿ ಶ್ರೀ ಆರ್ಯಅಕ್ಷೋಭ್ಯ ತೀರ್ಥ ಮಠಾಧೀಶರಾದ ಶ್ರೀ 108 ರಘುವಿಜಯತೀರ್ಥ ಶ್ರೀ ಪಾದಂಗಳವರ ನೇತೃತ್ವದಲ್ಲಿ ಜರುಗಿದ ರಥೋತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಬೆಳಗ್ಗೆ ಪಂಚಾಮೃತ, ಅಷ್ಟೋತ್ತರ, ಮಹಾಪೂಜೆ, ಬೆಳ್ಳಿ ರಥೋತ್ಸವ ಹಾಗೂ ಹೂವಿನ ಅಲಂಕಾರ ಸೇರಿ ಸಾರ್ವಭೌಮ ಗುರು ರಾಘವೇಂದ್ರಸ್ವಾಮಿಗಳಿಗೆ ವಿವಿಧ ಸೇವೆಗಳನ್ನು ನೆರವೇರಿಸಲಾಯಿತು.

ಮಠದ ಪ್ರಧಾನ ಅರ್ಚಕ ಶ್ರೀಧರಾಚಾರ್, ಪ್ರಮುಖರಾದ ಶ್ರೀನಿವಾಸಮೂರ್ತಿ, ಎನ್.ಜೆ.ವೆಂಕಟೇಶ್, ಬ್ರಾಹ್ಮಣ ಸಮಾಜದ ಅಧ್ಯಕ್ಷ ಎನ್.ಜಯರಾವ್, ಕಾರ್ಯದರ್ಶಿ ಉಮಾಕಾಂತ್ ಜೋಯ್ಸ, ವಿಶ್ವನಾಥ್, ಶ್ರೀನಿವಾಸ್ ಇತರರು ಪಾಲ್ಗೊಂಡಿದ್ದರು.