ಅಡಕೆ ತೋಟಗಳಿಗೆ ಸಂಕಷ್ಟ

ಹೊನ್ನಾಳಿ: ಅಂತರ್ಜಲ ಕುಸಿತದಿಂದ ತಾಲೂಕಿನಲ್ಲಿ ಕೊಳವೆಬಾವಿಗಳು ವಿಫಲವಾಗಿದ್ದು, ಅಡಕೆ ತೋಟ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.

ಸಿಂಗಟಗೇರಿ, ತರಗನಹಳ್ಳಿ, ಮಾಸಡಿ, ಕುಂದೂರು ಸೇರಿ ಇತರ ಹಳ್ಳಿಗಳಲ್ಲಿ ಸಾವಿರಾರು ಹೆಕ್ಟೇರ್‌ನಲ್ಲಿ ಬೆಳೆದಿದ್ದ ಅಡಕೆ ಬೆಳೆಗೆ ಈಗ ನೀರಿನ ಸಮಸ್ಯೆ ಎದುರಾಗಿದ್ದು, ಬೆಳೆಗಾರರು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ತೋಟಗಳ ಬಳಿ ಕೃಷಿ ಹೊಂಡ ನಿರ್ಮಿಸಿರುವ ರೈತರು ಬಾಡಿಗೆ ಮೂಲಕ ದಿನಕ್ಕೆ ಐದಾರು ಟ್ಯಾಂಕರ್ ನೀರನ್ನು ಹೊಂಡಗಳಿಗೆ ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ.

ಇದಕ್ಕೆ ಪ್ರತಿದಿನ ಐದಾರು ಸಾವಿರ ರೂಪಾಯಿ ಖರ್ಚು ತಗುಲುತ್ತಿದೆ. ಏಪ್ರಿಲ್, ಮೇನಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಮಾಡಿದರೆ ಜೂನ್‌ನಲ್ಲಿ ಮುಂಗಾರು ಆರಂಭವಾಗುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ. ಇಲ್ಲದಿದ್ದರೆ 25 ವರ್ಷಗಳಿಂದ ಕಾಪಾಡಿಕೊಂಡು ಬಂದ ಬೆಳೆ ಸಂಪೂರ್ಣ ಒಣಗಲಿದೆ ಎಂಬುದು ರೈತರ ಆತಂಕ.

Leave a Reply

Your email address will not be published. Required fields are marked *