18.5 C
Bangalore
Monday, December 16, 2019

ಕ್ರಿಕೆಟಲ್ಲೂ ಹನಿಟ್ರ್ಯಾಪ್!

Latest News

‘ದಿಶಾ ರೈಡ್ ಆಂಡ್ ವಾಕ್’ ಜಾಗೃತಿ ಜಾಥಾ

ಹುಬ್ಬಳ್ಳಿ: ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಶ್ರಯದಲ್ಲಿ ಇಲ್ಲಿನ ತೋಳನಕೆರೆಯಿಂದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ವರೆಗೆ ಭಾನುವಾರ ಬೆಳಗ್ಗೆ ‘ದಿಶಾ ರೈಡ್ ಆಂಡ್ ವಾಕ್’ ಘೋಷಣೆಯೊಂದಿಗೆ...

‘ಆಟೋ ರಿಕ್ಷಾ ರನ್’

ಹುಬ್ಬಳ್ಳಿ: ಕನ್ಯಾಕುಮಾರಿಯಿಂದ ಅಹಮದಾಬಾದ್​ವರೆಗೆ ‘ಆಟೋ ರಿಕ್ಷಾ ರನ್’ ಹಮ್ಮಿಕೊಂಡಿರುವ ಇಂಗ್ಲೆಂಡಿನ ‘ಸೇವಾ ಯುಕೆ’ ಸಂಸ್ಥೆಯ ಅನಿವಾಸಿ ಭಾರತೀಯರು ಭಾನುವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಗೋವಾದ...

ಗೀತೆ ಅಧ್ಯಯನದಿಂದ ಜೀವನ ಸುಖಮಯ

ಧಾರವಾಡ: ಗೀತೆ ದೀಪ ಸ್ವರೂಪ. ಅಜ್ಞಾನದ ಅಂಧಕಾರವನ್ನು ಕಳೆದು ಸುಜ್ಞಾನವನ್ನು ನೀಡುವುದು. ಸತ್ಸಂಗ ಮತ್ತು ಜ್ಯೋತಿ ಎರಡೂ ನಮ್ಮ ಜೀವನದಲ್ಲಿ ಪ್ರಧಾನ ಪಾತ್ರ...

ಸ್ವಾಮಿಯೇ ಶರಣಂ ಅಯ್ಯಪ್ಪ

ಹುಬ್ಬಳ್ಳಿ: ನಗರದ ಶಿರೂರು ಪಾರ್ಕ್ ಅಯ್ಯಪ್ಪ ಸ್ವಾಮಿ ದೇಗುಲದ ಮಾಲಾಧಾರಿಗಳು ಹಾಗೂ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ವತಿಯಿಂದ ನಗರದಲ್ಲಿ ಭಾನುವಾರ ಅಯ್ಯಪ್ಪ...

ದೇಶದಲ್ಲಿ ಹೆಚ್ಚುತ್ತಿದೆ ನಿರುದ್ಯೋಗ ಸಮಸ್ಯೆ

ಮೈಸೂರು: ಬಂಡವಾಳಶಾಯಿಗಳ ಪರ ಆಡಳಿತ ನಡೆಸುತ್ತಿರುವ ಸರ್ಕಾರಗಳು, ದುಡಿಯುವ ವರ್ಗವನ್ನು ಕಡೆಗಣಿಸಿವೆ. ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಸಾಕಷ್ಟು ಕಾರ್ಖಾನೆಗಳು ಬಾಗಿಲು...

ಬೆಂಗಳೂರು: ‘ಸಭ್ಯರ ಕ್ರೀಡೆ’ ಕ್ರಿಕೆಟ್​ಗೆ ಬೆಟ್ಟಿಂಗ್ ದಂಧೆಯ ಕಳಂಕ ಮೆತ್ತಿದ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಹಿಂದೆ ಹನಿಟ್ರಾ್ಯಪ್ ಅಪಸವ್ಯವೂ ಕಾಣಿಸಿಕೊಂಡಿದೆ. ಮ್ಯಾಚ್ ಫಿಕ್ಸಿಂಗ್​ನಲ್ಲಿ ಸಿಕ್ಕಿಬಿದ್ದ ಆಟಗಾರರನ್ನು ಹನಿಟ್ರಾ್ಯಪ್ ಮೂಲಕ  ಬ್ಲ್ಯಾಕ್​​​ವೆುೕಲ್ ಮಾಡಲಾಗಿತ್ತೆಂಬ ಸ್ಪೋಟಕ ಸಂಗತಿ ಸಿಸಿಬಿ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

ಆಟಗಾರರನ್ನು ದುಬೈ, ವೆಸ್ಟ್ ಇಂಡೀಸ್ ಮುಂತಾದೆಡೆ ಪ್ರವಾಸಕ್ಕೆ ಕಳುಹಿಸುತ್ತಿದ್ದ ಬೆಟ್ಟಿಂಗ್ ದಂಧೆ ಕೋರರು ಪಂಚತಾರಾ ಹೋಟೆಲ್​ಗಳಲ್ಲಿ ಪಾರ್ಟಿ ಏರ್ಪಡಿಸುತ್ತಿದ್ದರು. ಅಲ್ಲಿಗೆ ಯುವತಿಯರನ್ನು ಕಳುಹಿಸಿ ಆಟಗಾರರನ್ನು ಹನಿಟ್ರ್ಯಾಪ್​ಗೆ ಸಿಲುಕಿಸುತ್ತಿದ್ದರು. ಬಳಿಕ ಬ್ಲಾ್ಯಕ್​ವೆುೕಲ್ ಮಾಡಿ ಬೆಟ್ಟಿಂಗ್ ಸುಳಿಗೆ ಬೀಳಿಸುತ್ತಿದ್ದರು. ಹನಿಟ್ರ್ಯಾಪ್ ಜತೆಯಲ್ಲೇ ಹಣದ ಆಮಿಷ ಒಡ್ಡಿಯೂ ಫಿಕ್ಸಿಂಗ್ ಮಾಡುತ್ತಿದ್ದ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆಯೆಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಕ್ರಿಕೆಟ್​ಗೆ ಕಳಂಕ ಸುತ್ತಿದೆ. ಅದನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದೇವೆ. ಅದನ್ನು ಮಾಡಿಯೇ ತೀರುತ್ತೇವೆ. ಈಗಾಗಲೇ ಬೆಟ್ಟಿಂಗ್ ಮತ್ತು ಮ್ಯಾಚ್​ಫಿಕ್ಸಿಂಗ್​ನಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ) ಹಾಗೂ ಕೆಪಿಎಲ್ ತಂಡಗಳ ಮಾಲೀಕರು, ವ್ಯವಸ್ಥಾಪಕರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲಾಗಿದೆ. ಕೆಪಿಎಲ್ ಕಾರ್ಯನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕುವಂತೆ ಜಂಟಿ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಅವರಿಗೆ ಸೂಚಿಸಿದ್ದೇನೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.

ಲೆಕ್ಕ ಕೇಳಿದ ಸಿಸಿಬಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ) ಮತ್ತು ಕೆಪಿಎಲ್​ನ 8 ತಂಡಗಳ ಮಾಲೀಕರು ಮತ್ತು ವ್ಯವಸ್ಥಾಪಕರಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿ ಕ್ರಿಕೆಟ್ ಪಂದ್ಯಾವಳಿಯ ಒಟ್ಟು ವಹಿವಾಟು ವಿವರ ನೀಡುವಂತೆ ತಿಳಿಸಿದೆ.

ಬೆಟ್ಟಿಂಗ್​ನಲ್ಲೇ ಗಳಿಕೆ ಜಾಸ್ತಿ: ಪ್ರೇಕ್ಷಕರು ಮೈದಾನದಲ್ಲಿ ಆಡುವ ಆಟ ನಂಬಿ ಬರುತ್ತಾರೆ. ಆದರೆ ಕೆಲವು ಪಂದ್ಯದ ಆರಂಭಕ್ಕೂ ಮುನ್ನವೇ ಸೋಲು-ಗೆಲುವು ನಿಶ್ಚಯ ಆಗಿರುತ್ತದೆ. ಕೆಲ ಆಟಗಾರರು ಚೆನ್ನಾಗಿ ಆಡುತ್ತಿದ್ದರೂ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್​ನಲ್ಲಿ ಸಿಲುಕಿ ಕಳಪೆ ಪ್ರದರ್ಶನ ತೋರಿರುವುದು ತನಿಖೆಯಲ್ಲಿ ಗೊತ್ತಾಗಿದೆ. ದಂಧೆ ಮೇಲೆ ನಿಗಾವಹಿಸಬೇಕಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆ (ಬಿಸಿಸಿಐ) ಮತ್ತು ಕೆಎಸ್​ಸಿಎ ಮೂಕಪ್ರೇಕ್ಷಕರಂತಿವೆ. ಫಿಕ್ಸಿಂಗ್ ಬಗ್ಗೆ ಕ್ರಮ ಜರುಗಿಸುವಂತೆ ಸಂಸ್ಥೆಗಳಿಗೆ ಸೂಚಿಸುತ್ತೇನೆ. ಎದುರಾಳಿ ತಂಡದ ಆಟಗಾರರ ಜತೆ ಮಾತನಾಡುವುದು ಏಕೆ? ಪಂದ್ಯಗಳ ವಿಡಿಯೋ ಹಾಗೂ ವ್ಯವಸ್ಥಾಪಕರ ಹಿನ್ನೆಲೆ ಸೇರಿ ತಂಡದ ಪೂರ್ಣ ಮಾಹಿತಿ ಜತೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ಈ ಕೃತ್ಯ ಬೆಳಕಿಗೆ ಬಂದ ನಂತರ ಕೆಲವು ಹಿರಿಯ ಆಟಗಾರರು ಕ್ರಿಕೆಟ್ ಅಂಗಳದ ಸ್ವಚ್ಛತಾ ಕೆಲಸ ಪೂರ್ಣಗೊಳಿಸುವವರೆಗೆ ಕಾರ್ಯಾಚರಣೆ ನಿಲ್ಲಿಸದಂತೆ ಮನವಿ ಮಾಡಿದ್ದಾರೆಂದರು.

ಬಂಧಿತರ ಪಟ್ಟಿ: ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಶ್ಪಾಕ್ ಅಲಿ ತಾರ್, ಬಿಜಾಪುರ ಬುಲ್ಸ್ ತಂಡದ ಡ್ರಮರ್ ಭವೇಷ್ ಬಫ್ನ, ನಮ್ಮ ಶಿವಮೊಗ್ಗ ತಂಡ ಆಟಗಾರ ನಿಶಾಂತ್ ಸಿಂಗ್ ಶೆಕಾವತ್, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಬೌಲಿಂಗ್ ಕೋಚ್ ವಿನು ಪ್ರಸಾದ್, ಬ್ಯಾಟ್ಸ್ ಮನ್ ವಿಶ್ವನಾಥ್, ಬಳ್ಳಾರಿ ತಂಡದ ನಾಯಕ ಸಿ.ಎಂ. ಗೌತಮ್ ಮತ್ತು ಅಬ್ರಾರ್ ಕಾಜಿ ಮತ್ತು ಬುಕ್ಕಿ ಸನ್ಯಂ ಬಂಧಿತರು.

ಪ್ರತಿ ಹೆಜ್ಜೆಗೂ ಬೆಟ್ಟಿಂಗ್: ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಶ್ಪಾಕ್ ಅಲಿ ತಾರ್ ಪ್ರತಿಯೊಂದು ಪಂದ್ಯದಲ್ಲಿ ಬೆಟ್ಟಿಂಗ್ ನಡೆಸಿದ್ದ. ಟಾಸ್ ಆಯ್ಕೆ, ಆಟಗಾರರನ್ನು ಮೈದಾನಕ್ಕೆ ಇಳಿಸುವುದು ಸೇರಿ ಪ್ರತಿಯೊಂದು ಹಂತದಲ್ಲಿ ಪಾತ್ರವಹಿಸಿದ್ದ. ಅಲಿ ಜತೆ 12 ಆಟಗಾರರು ಸಂಪರ್ಕ ಹೊಂದಿದ್ದರು.

ಯಾರು ದುಬಾರಿ: 2019ರ ಕೆಪಿಎಲ್​ಗೆ ಜು.27ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಪವನ್ ದೇಶಪಾಂಡೆ 7.30 ಲಕ್ಷ ರೂ. ಮೊತ್ತಕ್ಕೆ ಶಿವಮೊಗ್ಗ ಲಯನ್ಸ್ ತಂಡ ಸೇರಿದ್ದರು. ಅನಿರುದ್ಧ ಜೋಶಿ 7.10 ಲಕ್ಷಕ್ಕೆ ಮೈಸೂರು ವಾರಿಯರ್ಸ್ ತಂಡದ ಪಾಲಾಗಿದ್ದರು.

ಹನಿಟ್ರ್ಯಾಪ್​ ಹೆಜ್ಜೆ: 1) 2012ರಲ್ಲಿ ಐಸಿಸಿ ದೂರಿನ ಮೇರೆಗೆ ದೆಹಲಿ ಪೊಲೀಸರು, ವಿಮಲ್ ಮರ್ವಾ ಎನ್ನುವವನನ್ನು ಬಂಧಿಸಿದ್ದರು. ಐಪಿಎಲ್ ಕ್ರಿಕೆಟಿಗರಿಗೆ ಹನಿಟ್ರ್ಯಾಪ್​ ಒಡ್ಡಿದ ಆರೋಪ ಇವನ ಮೇಲಿತ್ತು. 2) 2013ರಲ್ಲಿ ಐಪಿಎಲ್​ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದಾಗ ಎಸ್. ಶ್ರೀಶಾಂತ್ ಕೂಡ ಹನಿಟ್ರ್ಯಾಪ್​ಗೆ ಒಳಗಾಗಿದ್ದರೆಂಬ ಅನುಮಾನ ಎದ್ದಿದ್ದವು.

ಪತ್ತೆಹಚ್ಚಿದ್ದು ಆಟಗಾರ್ತಿ!

ಭಾರತ-ಇಂಗ್ಲೆಂಡ್ ನಡುವಿನ ಸೀಮಿತ ಓವರ್​ಗಳ ಸರಣಿಗೂ ಮುನ್ನ ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿಗೆ ಇಬ್ಬರು ಬುಕ್ಕಿಗಳು ಕರೆ ಮಾಡಿದ್ದರು. ಈ ಬಗ್ಗೆ ಸೆ.16ರಂದು ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಭಾಸ್ಕರ್ ರಾವ್, ಫಿಕ್ಸಿಂಗ್ ದಂಧೆ ಪತ್ತೆ ತನಿಖೆ ಹೊಣೆಯನ್ನು ಸಂದೀಪ್ ಪಾಟೀಲ್​ಗೆ ವಹಿಸಿದ್ದರು. ತನಿಖೆ ಕೈಗೊಂಡಾಗ 2 ತಿಂಗಳ ಹಿಂದೆ ನಡೆದಿದ್ದ ಕೆಪಿಎಲ್​ನ 8ನೇ ಆವೃತ್ತಿಯಲ್ಲಿ ಅಶ್ಪಾಕ್ ಅಲಿ ತಾರ್ ಬೆಟ್ಟಿಂಗ್​ನಲ್ಲಿ ತೊಡಗಿರುವ ಸುಳಿವು ಸಿಕ್ಕಿತ್ತು.

ಹನಿಟ್ರ್ಯಾಪ್​ ಮೂಲಕ ಆಟಗಾ ರರನ್ನು ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್​ಗೆ ಬುಕ್ಕಿಗಳು ಸೆಳೆದಿರುವುದು ಸ್ಪಷ್ಟ. ಇದರ ತನಿಖೆಗೆ ಸಿಸಿಬಿಯಲ್ಲಿ ವಿಶೇಷ ತಂಡ ರಚಿಸಲಾಗಿದೆ. ಎಲ್ಲಿಯವರೆಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ನೋಡೋಣ.

| ಭಾಸ್ಕರ್ ರಾವ್, ಬೆಂಗಳೂರು ಪೊಲೀಸ್ ಆಯುಕ್ತ

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ತನಿಖೆ ಮೇಲೆ ನನ್ನ ಪುತ್ರ ಒತ್ತಡ ಹೇರುತ್ತಿದ್ದಾನೆಂಬ ಆರೋಪ ಸುಳ್ಳು. ನಾನೂ ಕ್ರಿಕೆಟಿಗ, ನನ್ನ ಮಗ ಸಹ ಕ್ರಿಕೆಟಿಗ. ಹೀಗೆಂದ ಮಾತ್ರಕ್ಕೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ನನ್ನ ಮಗನಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಈ ಪ್ರಕರಣದ ತನಿಖೆಯನ್ನು ಅತ್ಯಂತ ಕಠಿಣವಾಗಿ ಮಾಡಿ ಎಂದು ಖುದ್ದು ನಾನೇ ಪೊಲೀಸ್ ಇಲಾಖೆಗೆ ಆದೇಶಿಸಿದ್ದೇನೆ.

| ಬಸವರಾಜ ಬೊಮ್ಮಾಯಿ ಗೃಹ ಸಚಿವ

ಕೆಪಿಎಲ್ ಇತಿಹಾಸ

1) ಐಪಿಎಲ್ ಮಾದರಿಯಲ್ಲಿ 2009ರಲ್ಲಿ ಆರಂಭ 2) ಟೂರ್ನಿ ಕೆಎಸ್​ಸಿಎ ಕನಸಿನ ಕೂಸು, ಚಿತ್ರನಟರ ತಂಡಕ್ಕೂ ಅವಕಾಶ 3) 2009ರಲ್ಲಿ ಫ್ರಾಂಚೈಸಿ ಹರಾಜಿ ನಿಂದ 35 ಕೋಟಿ ರೂ.ಆದಾಯ

ಸ್ಯಾಂಡಲ್​ವುಡ್ ನಂಟು?

ಕೆಪಿಎಲ್ ಪಂದ್ಯಾವಳಿಯಲ್ಲಿ ಗುರುತಿಸಿಕೊಂಡಿದ್ದ ಕೆಲ ಸ್ಯಾಂಡಲ್​ವುಡ್ ನಟಿಯರು ಆಟಗಾರರ ಜತೆಯೂ ಸ್ನೇಹ ಹೊಂದಿದ್ದರು. ಹೀಗಾಗಿ ಮ್ಯಾಚ್ ಫಿಕ್ಸಿಂಗ್ ಕಳಂಕ ಅವರಿಗೂ ಸುತ್ತಿಕೊಳ್ಳುವ ಸಾಧ್ಯತೆ ಇದೆ. ಅಗತ್ಯಬಿದ್ದರೆ ಅವರನ್ನೂ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.

  1. 10 ಕೋಟಿ ರೂ. ಟೂರ್ನಿಯ ಆವೃತ್ತಿಯೊಂದರಲ್ಲಿ ನಡೆಯುವ ಒಟ್ಟು ವಹಿವಾಟು
  2. 10 ಲಕ್ಷ ರೂ. ವಿಜೇತ ತಂಡದ ಗಳಿಕೆ
  3. 20 ಲಕ್ಷ ರೂ. ಟೂರ್ನಿಯ ಒಟ್ಟಾರೆ ಬಹುಮಾನ ಮೊತ್ತ
ಟಾರ್ಗೆಟ್ ಯಾರು? ಏಕೆ?
  1. ಕೆಲವು ಆಟಗಾರರು ಪ್ರತಿಭಾವಂತರಾಗಿದ್ದರೂ ರಾಷ್ಟ್ರೀಯ ತಂಡ ಸೇರುವ ಅದೃಷ್ಟ ಸಿಕ್ಕಿರುವುದಿಲ್ಲ. ಅವಕಾಶಕ್ಕಾಗಿ ಕಾದು ಸುಸ್ತಾಗಿರುವ ಇಂತಹ ಆಟಗಾರರು ಆಮಿಷಕ್ಕೊಳಗಾಗುವುದು ಹೆಚ್ಚು. ಹಣ, ಪಾರ್ಟಿಯ ಆಮಿಷವೊಡ್ಡಿ ಸೆಳೆಯಲಾಗುತ್ತದೆ
  2. ಕೆಪಿಎಲ್​ನಂತಹ ಟೂರ್ನಿಗಳನ್ನು ಯಾರೂ ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂಬ ಉದಾಸೀನತೆಯೂ ಇರಬಹುದು

ಕೆಲವು ಕ್ರಿಕೆಟಿಗರಿಂದ ರಾಜ್ಯದ ಕ್ರಿಕೆಟ್​ಗೆ ಮಸಿ ಬಳಿದಂತಾಗಿದೆ. ಕ್ರಿಕೆಟ್ ಅನ್ನು ಪರಿಶುದ್ಧವಾಗಿ ಇಡುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಸಂಪೂರ್ಣ ಶ್ರಮ ವಹಿಸಲಿದೆ. ಆಟಗಾರರಿಗೆ ಫಿಕ್ಸಿಂಗ್, ಹನಿಟ್ರಾ್ಯಪ್ ಕುರಿತಾಗಿ ಶಿಕ್ಷಣ ನೀಡಬೇಕಿದೆ. ತಪ್ಪು ಮಾಡಿರುವ ಕ್ರಿಕೆಟಿಗರ ವಿರುದ್ಧ ಈಗಾಗಲೇ ಕೆಲ ಕ್ರಮ ತೆಗೆದುಕೊಂಡಿದ್ದೇವೆ. ಪೊಲೀಸರಿಂದ ಅಂತಿಮ ವರದಿ ಬಂದ ಬಳಿಕ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ.

| ವಿನಯ್ ಮೃತ್ಯುಂಜಯ, ಕೆಎಸ್​ಸಿಎ ಖಜಾಂಚಿ/ವಕ್ತಾರ

Stay connected

278,753FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...