ನಿಮ್ಮ ವಿದೇಶಿ ಬೈಕ್​ ಜತೆ ಸೆಲ್ಫಿ ತೆಗೆದುಕೊಳ್ಳಲಾ ಎಂದು ಕೇಳಿದವರಿಗೆ ಒಪ್ಪಿಗೆ ನೀಡಿದ ಮಾಲೀಕ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ…

ಬೆಂಗಳೂರು: ವ್ಯಕ್ತಿಯೋರ್ವರು ಹೋಂಡಾ ಗೋಲ್ಡ್​ ವಿಂಗ್​ ಎಂಬ ವಿದೇಶಿ, ಹೊಸದಾದ ಬೈಕ್​ನ್ನು ಖರೀದಿಸಿ, ಕಣ್ಣೆದುರೇ ಕಳೆದುಕೊಂಡ ಘಟನೆಯಿದು.

ಗಣೇಶ್​ ಗೌಡ ಎಂಬುವರು ಈ ಬೈಕ್​ ಮಾಲೀಕ. ಬೆಂಗಳೂರಿನ ಕೋರಮಂಗಲದ ಬೆಥಾನಿ ಸ್ಕೂಲ್​ ಬಳಿ ಹೋಗುತ್ತಿದ್ದಾಗ ಹೋಂಡಾ ಆ್ಯಕ್ಟೀವಾದಲ್ಲಿ ಬಂದ ಇಬ್ಬರು ಪರಿಚಿತರು ಅವರ ಹೊಸ ಬೈಕ್​ನ್ನು ಎಗರಿಸಿದ್ದಾರೆ. ಈ ಇಬ್ಬರು ಗಣೇಶ್​ ಗೌಡ ಅವರ ಬಳಿ ಹೋಗಿ, ಇದು ವಿದೇಶೀ ಬೈಕ್​. ತುಂಬ ಸುಂದರವಾಗಿದೆ. ಇದರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅದಕ್ಕೆ ಗಣೇಶ್​ ಗೌಡ ಒಪ್ಪಿದ್ದಾರೆ. ಫೋಟೋ ತೆಗೆದುಕೊಂಡ ಅಪರಿಚಿತರು ಸುಮ್ಮನಿರದೆ ಗಣೇಶ್​ ಗೌಡ ಅವರ ಮೇಲೆ ಹಲ್ಲೆ ನಡೆಸಿ ಕೀ ಕಸಿದು, ಬೈಕ್​ ತೆಗೆದುಕೊಂಡು ಪರಾರಿಯಾಗಿದ್ದಾರೆ.

ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.