More

    ಹೋಂಡಾ ಬಿಎಸ್ VI -6ಜಿ ಆಕ್ಟಿವಾ ಬಿಡುಗಡೆ 

    ಬೆಂಗಳೂರು:  ‘ಪವರ್ ಆಫ್ 6’ ಜತೆ ಹೋಂಡಾದಿಂದ 2020 ಆಚರಣೆ ಭಾಗವಾಗಿ ಹೊಸ ಬಿಎಸ್ VI- 6ಜಿ ಆಕ್ಟಿವಾ ದ್ವಿಚಕ್ರವಾಹನ ಬಿಡುಗಡೆಯಾಗಿದ್ದು, ಆಕರ್ಷಕ ದರದೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

    ನವದೆಹಲಿಯಲ್ಲಿ ಶುಕ್ರವಾರ ಬಿಡುಗಡೆಗೊಂಡ ಬಿಎಸ್ VI -6ಜಿ ಆಕ್ಟಿವಾ ಪರಿಸರಸ್ನೇಹಿ ತಂತ್ರಜ್ಞಾನ ಹೊಂದಿದೆ. ಇಂಟಿಗ್ರೇಟೆಡ್ ಡ್ಯೂಯೆಲ್ ಫಂಕ್ಷನ್ ಸ್ವಿಚ್ ಇದ್ದು, ಶೇ.10ಕ್ಕೂ ಹೆಚ್ಚು ಮೈಲೇಜ್ ನೀಡುತ್ತದೆ. ಸ್ಟ್ಯಾಂಡರ್ಡ್ ಮತ್ತು ಡೀಲಕ್ಸ್ ಎಂಬೆರಡು ಮಾದರಿಗಳಲ್ಲಿ ಇದು ದೊರೆಯುತ್ತದೆ.

    ವಿಶ್ವಾಸಾರ್ಹತೆ: ಹೆಚ್ಚು ಬಾಳಿಕೆಗಾಗಿ ಸಂಪೂರ್ಣ ಲೋಹದ ಕವಚ ಅಳವಡಿಸಲಾಗಿದೆ. ಕಾಂಬಿ ಬ್ರೇಕ್ ಸಿಸ್ಟಮ್ ಮೂರು ಹಂತದ ಹೊಂದಾಣಿಕೆಯ ಸಸ್ಪೆನ್ಷನ್, ಮುಂಭಾಗದ ಚಕ್ರ 12 ಇಂಚು ವ್ಯಾಸ ಹೊಂದಿದೆ. 6 ವರ್ಷಗಳ ವಾರಂಟಿ ಒಳಗೊಂಡಿದೆ.

    ದರ, ಮಾದರಿ, ಬಣ್ಣಗಳು: ಬಿಎಸ್ VI -6ಜಿ ಆಕ್ಟಿವಾ ಸ್ಟ್ಯಾಂಡರ್ಡ್​ (ಎಕ್ಸ್ ಶೋರೂಂ 63,912 ರೂ.) ಮತ್ತು ಡೀಲಕ್ಸ್ (ಎಕ್ಸ್ ಶೋರೂಂ 65,412 ರೂ) ಮಾದರಿಗಳನ್ನು ಹೊಂದಿದ್ದು, ಗ್ಲಿಟ್ಟರ್ ಬ್ಲೂ, ಮೆಟಾಲಿಕ್ ನ್ಯೂ, ಪರ್ಲ್ ಸ್ಪಾರ್ಟನ್ ರೆಡ್, ಡ್ಯಾಜಲ್ ಯೆಲ್ಲೊ, ಮೆಟಾಲಿಕ್, ಬ್ಲ್ಯಾಕ್ ಪರ್ಲ್ ಪ್ರಿಸಿಯಸ್ ವೈಟ್ ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಎಂಬ 6 ವರ್ಣಗಳಲ್ಲಿ ಲಭ್ಯವಿವೆ.

    75 ಸಾವಿರ ವಾಹನಗಳು: ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೖೆವೇಟ್ ಲಿ. ಸಿಇಒ ಮತ್ತು ಎಂಡಿ ಮಿನೊರು ಕಾಟೊ ಮಾತನಾಡಿ, ಹೊಸ ನಿಬಂಧನೆ ಜಾರಿಗೆ ಬರುವ ಮೊದಲೇ ಹೋಂಡಾ ಕಂಪನಿ ದೇಶಾದ್ಯಂತ 75 ಸಾವಿರ ಬಿಎಸ್-6ಜಿ ಆಕ್ಟಿವಾ ವಾಹನ ಬಿಡುಗಡೆ ಮಾಡಿರುವುದಾಗಿ ಹೇಳಿದರು.

    ಫೆಬ್ರವರಿ ವೇಳೆಗೆ ಲಭ್ಯ

    ಹೋಂಡಾ ಮೋಟರ್​ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೖೆವೇಟ್ ಲಿ. ಹಿರಿಯ ಉಪಾಧ್ಯಕ್ಷ ಯದವಿಂದರ್ ಸಿಂಗ್ ಗುಲ್ಹೇರಿಯಾ ಮಾತನಾಡಿ, ಭಾರತದಾದ್ಯಂತ ಬ್ರ್ಯಾಂಡ್ ಆಗಿ 2 ದಶಕಗಳಿಂದ ಮುಂಚೂಣಿಯಲ್ಲಿರುವ ಆಕ್ಟಿವಾ ಕುರಿತು ವಿಶ್ವಾಸ ಹೆಚ್ಚಿದೆ. ಬಿಎಸ್-6ಜಿ ಆಕ್ಟಿವಾ ಹೊಸ ಸಾಧನೆಗೆ ನಾಂದಿ ಹಾಡಿದ್ದು, ಫೆಬ್ರವರಿ ವೇಳೆಗೆ ವಿತರಕರಲ್ಲಿ ಲಭ್ಯವಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts