ಅಸ್ತಮಾಕ್ಕೆ ಹೋಮಿಯೋಪಥಿ ಚಿಕಿತ್ಸೆ

# ನನ್ನ ಮಗನ ವಯಸ್ಸು 15 ವರ್ಷ. ಆತನಿಗೆ ಚಿಕ್ಕ ವಯಸ್ಸಿನಿಂದ ಅಸ್ತಮಾ ರೋಗವಿದೆ. ಅವನಿಗೆ ವಾತಾವರಣದಲ್ಲಿ ಏರುಪೇರಾದಾಗ, ಚಳಿಗಾಳಿಯಿಂದ ಮತ್ತು ಬಿಕ್ಕಳಿಸಿ ಅಳುವಾಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ವಿವಿಧ ರೀತಿಯಲ್ಲಿ ಔಷಧೋಪಚಾರ ಮಾಡಿದರೂ ಫಲಿತಾಂಶ ಕಾಣಲಿಲ್ಲ. ಹೋಮಿಯೋಪಥಿಯಲ್ಲಿ ಈ ಸಮಸ್ಯೆಗೆ ಪರಿಹಾರ ಇದೆಯೇ? ದಯವಿಟ್ಟು ತಿಳಿಸಿ. 

ಅಸ್ತಮಾ ಸಮಸ್ಯೆ ಇದ್ದ ವ್ಯಕ್ತಿಗಳು, ಅಗತ್ಯಕ್ಕಿಂತ ಹೆಚ್ಚಾಗಿ ಖುಷಿಪಟ್ಟಾಗ, ಬಿಕ್ಕಿಬಿಕ್ಕಿ ಅತ್ತಾಗ ಇಲ್ಲವೇ ತೀವ್ರವಾಗಿ ಮಾನಸಿಕ ಒತ್ತಡಕ್ಕೆ ಗುರಿಯಾದ ಸಂದರ್ಭಗಳಲ್ಲಿ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಈ ಸಮಸ್ಯೆಗೆ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಈ ರೋಗವನ್ನು ನಾವು ‘ಕಾನ್​ಸ್ಟಿಟ್ಯೂಷನಲ್ ಹೋಮಿಯೋ ಚಿಕಿತ್ಸೆ’ಯಿಂದ ಗುಣಪಡಿಸುತ್ತೇವೆ.

ಅಧಿಕ ಒತ್ತಡದಿಂದಾಗಿ ರೋಗಿಯ ದೇಹದ ಒಳಗೆ ಪ್ರವೇಶಿಸುವ ಗಾಳಿಯ ಪ್ರಚೋದನಾತ್ಮಕ ಅಂಶಗಳಿಂದ ಹಾಗೂ ರೋಗಿ ಅಧಿಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾದಾಗ ಶ್ವಾಸಕೋಶದಲ್ಲಿ ಉಸಿರಾಟ ಕ್ರಿಯೆಯ ಪ್ರಮಾಣ ಹೆಚ್ಚಾಗಿರುತ್ತದೆ. ಹೀಗಾಗಿ ಶ್ವಾಸನಾಳದಲ್ಲಿ ಗಾಳಿ ಹೋಗುವ ಜಾಗ ಕಡಿಮೆ ಆಗುತ್ತದೆ ಮತ್ತು ಉಸಿರಾಟ ಕ್ರಿಯೆ ಹೆಚ್ಚಾಗುತ್ತದೆ. ಆಗ ಶ್ವಾಸಕೋಶದಲ್ಲಿ ಗಾಳಿ ಹೋಗುವ ಜಾಗದಲ್ಲಿ ಉರಿಯೂತ (inflammation) ಉಂಟಾಗುತ್ತದೆ, ಜತೆಗೆ, ಕಫ ಉತ್ಪತ್ತಿಯಾಗುತ್ತದೆ. ಆದ್ದರಿಂದ ಈ ಅಸ್ತಮಾ ರೋಗಿಗಳಲ್ಲಿ ಅವರ ಶ್ವಾಸಕೋಶವು ಸದಾ ಇನ್​ಫೆಕ್ಷನ್​ಗೆ ಗುರಿಯಾಗುತ್ತಿರುತ್ತದೆ.

ಅಸ್ತಮಾ ಪ್ರಚೋದಕಗಳು: ಗಾಳಿಯಿಂದ ಬರುವಂಥ ಪ್ರಚೋದಕಗಳೆಂದರೆ ಮನೆಯಲ್ಲಿರುವ ಧೂಳು, ಜಿರಲೆ ಮತ್ತು ಪೊಲೆನ್ (ಗಿಡಗಳಲ್ಲಿರುವ ಪರಾಗ).

ಧೂಮಪಾನದ ಹೊಗೆ ಹಾಗೂ ಹಲವು ರೀತಿಯ ರಾಸಾಯನಿಕಗಳು

ಶೀತ, ಜ್ವರ ಹಾಗೂ ನಿಮೋನಿಯಾ

ವ್ಯಾಯಾಮದಿಂದ ಕೆಲವು ಜನರಿಗೆ ಉಸಿರಾಟ ಕ್ರಿಯೆ ಜಾಸ್ತಿ ಆಗುತ್ತದೆ

ಕೆಲಸ ಮಾಡುವ ಸ್ಥಳದಲ್ಲಿರುವ ಹೊಗೆಯಿಂದ ಕೂಡ ಅಸ್ತಮಾ ಬರುತ್ತದೆ

ಅಧಿಕ ಮಾನಸಿಕ ಒತ್ತಡ, ಕೋಪ, ಭಯ ಹಾಗೂ ತೀವ್ರ ಸಂತೋಷದಿಂದಲೂ ಇದು ಬರುತ್ತದೆ.

ಲಕ್ಷಣಗಳು: ಉಸಿರಾಟ ಕ್ರಿಯೆಗೆ ತೊಂದರೆ, ಉಸಿರಾಟಕ್ಕೆ ಕಷ್ಟ

ಉಸಿರನ್ನು ಬಿಡುವಾಗ ವೀಜಿಂಗ್ ಸೌಂಡ್ ಬರುತ್ತದೆ

ಕಫ ಬರುತ್ತದೆ. ಹೆಚ್ಚಾಗಿ ರಾತ್ರಿ ಮತ್ತು ಮುಂಜಾನೆ ಸಮಯದಲ್ಲಿ ಸಮಸ್ಯೆ ಹೆಚ್ಚಾಗುತ್ತದೆ.

ಉಸಿರಾಟ ಕ್ರಿಯೆಗೆ ತೊಂದರೆ ಉಂಟಾದಾಗ ಮತ್ತು ಕಫದಿಂದ ರಾತ್ರಿಯ ನಿದ್ದೆಯ ಕಷ್ಟವಾಗುತ್ತದೆ.

ಹೋಮಿಯೋಕೇರ್ ಚಿಕಿತ್ಸೆ: ‘ಹೋಮಿಯೋಕೇರ್ ಇಂಟರ್​ನ್ಯಾಷನಲ್ ಕಾನ್​ಸ್ಟಿಟ್ಯೂಷನಲ್ ಹೋಮಿಯೋ’ ಚಿಕಿತ್ಸೆ ಕೊಡಲಾಗುವುದು. ಇಲ್ಲಿ ರೋಗಿಯ ರೋಗ ಲಕ್ಷಣ, ಆತನ ದೇಹ, ಶರೀರ ಮತ್ತು ಮಾನಸಿಕ ಲಕ್ಷಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಚಿಕಿತ್ಸೆ ಕೊಡಲಾಗುತ್ತದೆ. ಅದೇ ರೀತಿಯಲ್ಲಿ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದ್ದರೆ, ಅದನ್ನು ಸರಿಪಡಿಸಿ ಚಿಕಿತ್ಸೆ ನೀಡಲಾಗುತ್ತದೆ. ಅಸ್ತಮಾ ಪ್ರಚೋದಕಗಳು ಪದೇ ಪದೇ ಬಾಧಿಸದಂತೆ ಶರೀರವನ್ನು ಬಲಪಡಿಸಲಾಗುತ್ತದೆ.

ಶಾಖೆಗಳು: ಕರ್ನಾಟಕ: ಬೆಂಗಳೂರು (ಜಯನಗರ, ಮಲ್ಲೇಶ್ವರ, ಇಂದಿರಾನಗರ, ಎಚ್​ಎಸ್​ಆರ್ ಲೇಔಟ್), ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ, ಶಿವಮೊಗ್ಗ, ತುಮಕೂರು, ಹಾಸನ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೆರಿ. ಉಚಿತ ಸಲಹೆ: 955 000 1133 ಟೋಲ್ ಫ್ರೀ ಸಂಖ್ಯೆ: 1800 108 1212