More

    ಕಿಡ್ನಿ ಕಲ್ಲುಗಳಿಗೆ ಹೋಮಿಯೋಕೇರ್ ಪರಿಹಾರ

    ಕಿಡ್ನಿಯಲ್ಲಿ ಕಲ್ಲುಗಳು ಏರ್ಪಡುವ ಸಮಸ್ಯೆ ಇತ್ತೀಚೆಗೆ ಬಹಳ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಶೇ. 50ರಷ್ಟು ಜನರಲ್ಲಿ ಕೆಲವರಲ್ಲಿ ಶಸ್ತ್ರಚಿಕಿತ್ಸೆಯಿಂದ ತೆಗೆದು ಹಾಕಿದ ನಂತರ ಪುನಃ ಮತ್ತೆ ಬರುವ ಸಾಧ್ಯತೆ ಇರುತ್ತದೆ. ಕಾನ್ಸಿ್ಟಟ್ಯೂಷನ್​ನಲ್ ಹೋಮಿಯೋ ಚಿಕಿತ್ಸೆಯಿಂದ ಇವು ಮತ್ತೆ ಬರದ ಹಾಗೆ ಮಾಡಬಹುದು. ನಮ್ಮ ಶರೀರದಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರ ವಹಿಸುತ್ತವೆ. ರಕ್ತ ಶುದ್ಧೀಕರಿಸಿ ಕೆಟ್ಟ ಪದಾರ್ಥ, ದೇಹದ ನೀರನ್ನು ಶೋಧಿಸಿ ಶರೀರದಲ್ಲಿರುವ ಲವಣಗಳ ಸಮತೋಲನವನ್ನು ಕಾಪಾಡುತ್ತವೆ. ಯಾವಾಗ ಮೂತ್ರಗಳ ಮೂಲಕ ಲವಣಗಳು ಘನ ರೂಪ ಪಡೆದು ನಿಂತುಬಿಡುತ್ತವೋ ಆಗ ಕಿಡ್ನಿಗಳಲ್ಲಿ ಕಲ್ಲುಗಳು ಬೆಳೆಯುತ್ತವೆ. ಮೂತ್ರ ವ್ಯವಸ್ಥೆಯ ಭಾಗವಾದ ಮೂತ್ರಪಿಂಡಗಳು, ಮೂತ್ರನಾಳಗಳು, ಮೂತ್ರಕೋಶ ಹೀಗೆ ಎಲ್ಲ ಕಡೆಯೂ ಕಲ್ಲುಗಳು ಕಾಣಿಸಿಕೊಳ್ಳುತ್ತವೆ.

    ಕಾರಣಗಳು: ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿಯಿಂದ ಕಿಡ್ನಿಯಲ್ಲಿ ಕಲ್ಲುಗಳು ಆಗಬಹುದು. ಕೆಲವರಲ್ಲಿ ಮೂತ್ರಕೋಶದ ಸೋಂಕು, ಮೂತ್ರಮಾರ್ಗದಲ್ಲಿ ಅಡಚಣೆ ಇದ್ದರೆ, ಒಂದೇ ಕಡೆ ಕುಳಿತು ಕೆಲಸ ಮಾಡುವವರಲ್ಲಿ ಮಿಟಮಿನ್ ಎ ಕಡಿಮೆಯಾಗುವುದರಿಂದ ಕಲ್ಲಾಗಬಹುದು. ಆಹಾರದಲ್ಲಿ ಮಾಂಸದ ವಿಧಗಳು, ಉಪ್ಪು ಹೆಚ್ಚಾಗುವುದು, ಸಾಧಾರಣಕ್ಕಿಂತ ಕಡಿಮೆ (ಅಂದರೆ ದಿನವೂ 1.5 ಲೀಟರ್​ಗಿಂತ ಕಡಿಮೆ) ನೀರು ಕುಡಿಯುವುದರಿಂದಲೂ ಈ ಸಮಸ್ಯೆ ಉಂಟಾಗಬಹುದು. ಇನ್ನು ಕೆಲವು ರೋಗಗಳು, ವಿಟಮಿನ್ ಸಿ, ಕ್ಯಾಲ್ಸಿಯಂ ಸಪ್ಲಿಮೆಂಟ್​ಗಳಿಂದಲೂ ಕಲ್ಲುಗಳ ಸೃಷ್ಟಿಯಾಗಬಹುದು.

    ಲಕ್ಷಣಗಳು: ತೀವ್ರವಾದ ಬೆನ್ನುನೋವು, ಹೊಟ್ಟೆನೋವು, ವಾಂತಿ, ಮೂತ್ರದಲ್ಲಿ ಉರಿ ಪ್ರಧಾನ ಲಕ್ಷಣಗಳು. ಕೆಲವರಲ್ಲಿ ಒಂದೇ ಕಡೆ ಬೆನ್ನುನೋವು ಬರುವುದು. ನೋವಿನ ಜತೆ ಜ್ವರ, ಮೂತ್ರದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಮತ್ತೆ ಕೆಲವರಲ್ಲಿ ಮೂತ್ರನಾಳಗಳಲ್ಲಿ ಕಲ್ಲುಗಳು ಉಂಟಾಗುವುದರಿಂದ ಬೆನ್ನುನೋವು, ಹೊಕ್ಕಳಿನ ಮಧ್ಯಭಾಗದಲ್ಲಿ ನೋವು, ಕೆಳಗಿನ ಹೊಟ್ಟೆ ನೋವು ಕಾಣಿಸಬಹುದು. ಕೆಲವೊಮ್ಮೆ ಯಾವುದೇ ಲಕ್ಷಣ, ನೋವು ಇಲ್ಲದೆಯೂ ಕಲ್ಲುಗಳು ಇರಬಹುದು, ಇವುಗಳಿಗೆ ಸೈಲೆಂಟ್ ಸ್ಟೋನ್ ಅನ್ನುತ್ತಾರೆ.

    ಚಿಕಿತ್ಸೆ: ಹೋಮಿಯೋಕೇರ್ ಇಂಟರ್​ನ್ಯಾಷನಲ್​ನಲ್ಲಿ ಶಸ್ತ್ರಚಿಕಿತ್ಸೆಯಿಲ್ಲದೆ ಕಲ್ಲುಗಳನ್ನು ನಿಯಂತ್ರಣದಲ್ಲಿಡುವ ಅವಕಾಶವಿದೆ. ರೋಗ ಲಕ್ಷಣಗಳು, ಮಾನಸಿಕ, ಶಾರೀರಿಕ ಲಕ್ಷಣಗಳನ್ನು ಪರಿಗಣಿಸಿ ಚಿಕಿತ್ಸೆ ಕೊಡಲಾಗುವುದು. ಕೆಲವರಲ್ಲಿ ಶಸ್ತ್ರಚಿಕಿತ್ಸೆಯಿಂದ ಕಲ್ಲು ತೆಗೆದುಹಾಕಿದರೂ ಮತ್ತೆ ಕಾಣಿಸಿಕೊಳ್ಳುತ್ತದೆ. ಆದರೆ, ಹೋಮಿಯೋಕೇರ್ ಇಂಟರ್​ನ್ಯಾಷನಲ್ ವೈದ್ಯರು ಕಿಡ್ನಿಯ ಲವಣಗಳ ಅಸಮತೋಲನವನ್ನು ಸರಿಪಡಿಸಿ, ಕಿಡ್ನಿಗಳ ಕೆಲಸ ಸುಧಾರಣೆ ಮತ್ತು ಕಲ್ಲುಗಳು ಉಂಟಾಗದ ಹಾಗೆ ಒಳ್ಳೆಯ ಚಿಕಿತ್ಸೆ ಇದೆ.

    ಕರ್ನಾಟಕ: ಬೆಂಗಳೂರು (ಜಯನಗರ, ಮಲ್ಲೇಶ್ವರ, ಇಂದಿರಾನಗರ, ಎಚ್​ಎಸ್​ಆರ್ ಲೇಔಟ್), ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ, ಶಿವಮೊಗ್ಗ, ತುಮಕೂರು, ಹಾಸನ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೆರಿ. ಉಚಿತ ಸಲಹೆ: 955 000 1133 ಟೋಲ್ ಫ್ರೀ ಸಂಖ್ಯೆ: 1800 108 1212.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts