ಬದಲಾಗುತ್ತಿರುವ ಜೀವನ ಶೈಲಿಯಿಂದ ಬೆನ್ನಿನ ಭಾಗದಲ್ಲಿ ಹೆಚ್ಚಾಗಿ ಒತ್ತಡ ಬೀಳುವುದರಿಂದ ಶೇ. 80ರಷ್ಟು ಜನರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ, ಸಾಧಾರಣವಾಗಿ 20 ರಿಂದ 40 ವರ್ಷದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಕಾರಣಗಳು ಒಂದೇ ಭಂಗಿಯಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದು.
ಹೆಚ್ಚು ದೂರ ದ್ವಿಚಕ್ರ ವಾಹನಗಳನ್ನು ಚಲಾಯಿಸುವುದು. ್ಝಸ್ಕ್ ಹಾಗೂ ನರಗಳ ತೊಂದರೆಗಳು. ಬೆನ್ನಿನ ಎಲುಬು ಕ್ಷಯ, ಕ್ಯಾನ್ಸರ್ಗೆ ತುತ್ತಾದಲ್ಲಿ. ಬೆನ್ನಿಗೆ ಸಂಬಂಧಿಸಿದ ಮೂಳೆಗಳು, ಮಾಂಸ ಖಂಡಗಳು, ಡಿಸ್ಕ್ ನರಗಳ ಸಮಸ್ಯೆಗಳಿದ್ದಲ್ಲಿ. ್ಝ ಬೊಜ್ಜು, ಧೂಮಪಾನ, ಮದ್ಯಪಾನ. ್ಝ ಹೆಚ್ಚು ಭಾರವಾದ ವಸ್ತುಗಳನ್ನು ಎತ್ತುವುದು. ವಯೋಸಹಜವಾಗಿ… ಇತ್ಯಾದಿ
ಬೆನ್ನು ಮತ್ತು ಡಿಸ್ಕ್ ಸಮಸ್ಯೆಗಳು
ಅನ್ಯೂಲಾರ್ ಟಿಯರ್: ಮೇಲೆ ತಿಳಿಸಿದ ಕಾರಣಗಳಿಂದ ಬೆನ್ನುಹುರಿ ಮಧ್ಯೆ ಇರುವ ಇಂಟರ್ ವರ್ಟಿಬ್ರಲ್ ಡಿಸ್ಕ್ ಒಳಗೆ ಒಂದು ಭಾಗ ಹರಿದು ಹೋಗುತ್ತದೆ.
ಹರ್ನಿಯೇಟೆಡ್ ಡಿಸ್ಕ್: ಬಲಹೀನವಾದ ಡಿಸ್ಕ್ ಅಂಚು ಹರಿದು ಅದರ ಮಧ್ಯೆ ಭಾಗದಲ್ಲಿರುವ ಮೆತ್ತನೆಯ ನ್ಯೂರ್ಲೆಯಸ್ ಹೊರಗೆ ಬರುತ್ತದೆ.
ಸ್ಪಾಂಡಿಲೋಸಿಸ್: ಇದರಲ್ಲಿ ಬೆನ್ನಿನಲ್ಲಿರುವ ಮೂಳೆಗಳು ಮಿತಿ ಮೀರಿ ಮುಂದಕ್ಕೆ ಇಲ್ಲವೆ ಹಿಂದಕ್ಕೆ ಜಾರುತ್ತದೆ. ನರಗಳ ಮೇಲೆ ಒತ್ತಡ ಬೀಳುವುದರಿಂದ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ.
ಸ್ಪೈನಲ್ ಸ್ಟೀನೊಸಿಸ್: ಬೆನ್ನಿನ ಒಳಗೆ ಇರುವ ಸ್ಪೈನಲ್ ಕೆನಾಲ್ ಅನ್ನುವ ನಾಳ ಇಕ್ಕಟ್ಟಾಗುತ್ತದೆ. ಇದು ತೀವ್ರವಾದಾಗ ನಾಳದಲ್ಲಿರುವ ಬೆನ್ನುಹುರಿ ಒತ್ತಡಕ್ಕೆ ಗುರಿಯಾಗುತ್ತದೆ. ಕಾಲುಗಳು ಬಲಹೀನವಾಗುವುದು, ಮರಗಟ್ಟುವುದು, ಮಲ ಮೂತ್ರ ವಸರ್ಜನೆ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತದೆ.
ಅಂಕಿಲೋಸಿಂಗ್ ಸ್ಪಾಂಡಿಲೋಸಿಸ್: ಇದು ಬೆನ್ನು ಮೂಳೆಯು ದೀರ್ಘಕಾಲದ ಊತಕ್ಕೆ ಗುರಿಯಾಗುವುದರಿಂದ ಬರುತ್ತದೆ. ಹೀಗಾದಲ್ಲಿ ಬೆನ್ನು ಮೂಳೆಗಳು ಬಿಗಿಯಾಗಿ ಸೊಂಟ ಅಲುಗಾಡಿಸುವುದಕ್ಕೆ ಕಷ್ಟವಾಗುತ್ತದೆ.
ಹೋಮಿಯೋಕೇರ್ ಚಿಕಿತ್ಸೆ
ಹೋಮಿಯೋಕೇರ್ ಇಂಟರ್ನ್ಯಾಷನಲ್ನಲ್ಲಿ ಜೆನಿಟಿಕ್ ಕಾನ್ಸಿಟ್ಯೂಷನಲ್ ಚಿಕಿತ್ಸಾ ವಿಧಾನದಿಂದ ಸಮಸ್ಯೆಯ ಮೂಲ ಕಾರಣ ಹುಡುಕಿ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಪರಿಹಾರ ಮಾಡಲಾಗುವುದು. ಬೆನ್ನು ನೋವಿನ ಸಮಸ್ಯೆ ಮತ್ತೆ ಬಾರದಂತೆ ಗುಣಪಡಿಸಲಾಗುವುದು. ಇದರಿಂದ ಯಾವುದೇ ಅಡ್ಡಪರಿಣಾಮವೂ ಇಲ್ಲ.