ಹೋಂವರ್ಕ್​ನಲ್ಲಿ ಭಾರತೀಯ ಪಾಲಕರೇ ಮುಂದು

ಲಂಡನ್: ಮಕ್ಕಳ ಶಾಲಾ ಕೆಲಸಗಳಲ್ಲಿ ಕೈಜೋಡಿಸುವುದರಲ್ಲಿ ಭಾರತೀಯ ಪಾಲಕರೇ ಮುಂದು ಎಂದು ವಿಶ್ವಾದ್ಯಂತದ ನಡೆಸಿದ ಶೈಕ್ಷಣಿಕ ಅಧ್ಯಯನದಿಂದ ಬಹಿರಂಗವಾಗಿದೆ. ಬ್ರಿಟನ್ ಮೂಲದ ವರ್ಕೆ ಸಂಸ್ಥೆ ನಡೆಸಿರುವ ಗ್ಲೋಬಲ್ ಪೇರೆಂಟ್ಸ್ ಸಮೀಕ್ಷೆಯಲ್ಲಿ 29 ರಾಷ್ಟ್ರಗಳ 27,000 ಪಾಲಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದ್ದು, ಭಾರತದ ಶೇ.95ರಷ್ಟು ಪಾಲಕರು ಮಕ್ಕಳ ಶಿಕ್ಷಣದಲ್ಲಿ ಸಹಾಯ ಮಾಡಲು ಬಯಸುತ್ತಾರೆ. ಶೇ. 62ರಷ್ಟು ಪಾಲಕರು ವಾರದ ಏಳು ದಿನವೂ ಮಕ್ಕಳ ಹೋಂವರ್ಕ್​ಗೆ ಸಹಾಯ ಮಾಡುತ್ತಾರೆ. ಆದರೆ, ಬ್ರಿಟನ್​ನ ಪಾಲಕರು ಮಕ್ಕಳ ಶಾಲಾ ಕಾರ್ಯಗಳಿಗಾಗಿ ದಿನದಲ್ಲಿ 1 ಗಂಟೆಯನ್ನು ಮೀಸಲಿಡಲು ಹಿಂದೇಟು ಹಾಕುತ್ತಾರೆ. ಶೇಕಡ 72ರಷ್ಟು ಭಾರತೀಯ ಪಾಲಕರು ಕಳೆದ 10 ವರ್ಷಗಳ ಅವಧಿಯಲ್ಲಿ ಭಾತರದಲ್ಲಿ ಶಿಕ್ಷಣದ ಗುಣಮಟ್ಟ ವೃದ್ಧಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. -ಏಜೆನ್ಸೀಸ್

Leave a Reply

Your email address will not be published. Required fields are marked *