ತಲೆಯಲ್ಲಿ ಹೇನು ಇದ್ಯಾ? ಹೀಗೆ ಮಾಡಿದ್ರೆ ಸಾಕು…

 ಬೆಂಗಳೂರು:   ಕೂದಲಿನ ಸಮಸ್ಯೆಗಳಲ್ಲಿ ಹೇನುಗಳ ಸಮಸ್ಯೆ ಬಹಳ ಕಿರಿಕಿರಿ ಉಂಟು ಮಾಡುತ್ತದೆ. ಹೇನು ಸೀರುಗಳ ಸಮಸ್ಯೆಗೆ ನೀವು ಮನೆ ಮದ್ದು ಬಳಸಿದರೆ ಕೆಲವೇ ದಿನಗಳಲ್ಲಿ ಪರಿಹಾರ ದೊರೆಯುತ್ತದೆ. ನಾವು ನಿಮಗೆ ಕೆಲವು ಸಲಹೆಗಳನ್ನು ಇಂದು ನೀಡುತ್ತೇವೆ..

ಕರ್ಪೂರವನ್ನು ಪುಡಿ ಮಾಡಿ ಕೊಬ್ಬರಿ ಎಣ್ಣೆಯೊಂದಿಗೆ ಮಿಕ್ಸ್‌ ಮಾಡಿ. ಇದನ್ನು ಬುಡದ ಸಹಿತ ನಿಮ್ಮ ತಲೆಗೆ ಹಚ್ಚಿಕೊಂಡು ಮಸಾಜ್‌ ಮಾಡಿ. ಒಂದು ಗಂಟೆ ನಂತರ ಶ್ಯಾಂಪೂ ಮಾಡಿ. ಇದರಿಂದ ಹೇನುಗಳು ಮಾತ್ರವಲ್ಲ ಅವುಗಳ ಮೊಟ್ಟೆಗಳು ಕೂಡಾ ನಿವಾರಣೆಯಾಗುತ್ತವೆ.

ಬೆಳ್ಳುಳ್ಳಿ ಎಸಳನ್ನು ರುಬ್ಬಿ ಅದಕ್ಕೆ ನಿಂಬೆರಸ ಬೆರೆಸಿ ಕೂದಲಿಗೆ ಹಚ್ಚಿ. ಅರ್ಧ ಗಂಟೆವರೆಗೆ ಬಿಟ್ಟು ಮೃದುವಾದ ಶ್ಯಾಂಪೂವಿನಿಂದ ಕೂದಲನ್ನು ತೊಳೆಯಿರಿ. ಇದು ಆಂಟಿಮೈಕ್ರೊಬಿಯಲ್, ಆಲಿಸಿನ್ ಮತ್ತು ಸಲ್ಫರ್ ಗುಣಲಕ್ಷಣಗಳನ್ನು ಹೊಂದಿದೆ. ಹೆಚ್ಚುವರಿ ಎಣ್ಣೆ ಮತ್ತು ಮೇದೋಗ್ರಂಥಿಗಳ ಶೇಖರಣೆಯನ್ನು ಕಡಿಮೆ ಮಾಡುತ್ತದೆ. ಉದ್ದವಾದ, ಬಲವಾದ ಕೂದಲಿಗೆ ಇದನ್ನು ಬಳಸಿ.

ಬೇವಿನ ಎಣ್ಣೆ ಕೂಡ ತುಂಬಾ ಪರಿಣಾಮಕಾರಿ. ಬೇವಿನ ಎಣ್ಣೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಬೇವಿನ ಎಣ್ಣೆಯನ್ನು ತಲೆಗೆ ಹಚ್ಚಿ ಮರುದಿನ ಶಾಂಪೂದಿಂದ ಸ್ನಾನ ಮಾಡಿದರೆ ಸಾಕು. ಸ್ನಾನದ ನಂತರ ನಿಮ್ಮ ಕೂದಲನ್ನು ಬಾಚಿಕೊಂಡರೆ, ಎಲ್ಲಾ ಹೇನುಗಳು ಬಾಚಣಿಗೆ ಬರುತ್ತವೆ.

ಸ್ವಲ್ಪ ಸೋಡಾವನ್ನು ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆ ಜೊತೆಗೆ ಬೆರೆಸಿ ತಲೆಯ ಬುಡಕ್ಕೆ ಹಚ್ಚಿ. ಸುಮಾರು 30 ನಿಮಿಷಗಳ ನಂತರ ಶ್ಯಾಂಪೂ ಹಾಗೂ ಕಂಡಿಷನರ್‌ನಿಂದ ಸ್ವಚ್ಛಗೊಳಿಸಿ

ಕೆಲವೊಂದು ಪದಾರ್ಥಗಳು ಅಲರ್ಜಿ ಉಂಟು ಮಾಡಬಹುದು. ಬಳಸುವ ಮುನ್ನ ಒಮ್ಮೆ ಪ್ಯಾಚ್‌ ಟೆಸ್ಟ್‌ ಮಾಡಿ. ಇಲ್ಲವಾದಲ್ಲಿ ವೈದ್ಯರ ಸಲಹೆ ಪಡೆದುಕೊಳ್ಳಿ.

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…