More

    ಸೆಲ್ಯೂಟ್ ಸಿಗುತ್ತೆ, ಲಾಠಿ ಚಾರ್ಜ್, ಒದೆಯೂ ಸಿಗುತ್ತೆ, ಗುಂಡು ಹಾರಿಸುವುದಕ್ಕೂ ಪೊಲೀಸರು ರೆಡಿ: ಸಚಿವ ಪರಮೇಶ್ವರ್ ಹೇಳಿಕೆ

    ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆ ಶಿಸ್ತು, ಬದ್ಧತೆ, ಕರ್ತವ್ಯ ನಿಷ್ಠೆಗೆ ಹೆಸರು ವಾಸಿ. ಇಲಾಖೆಯಿಂದ ಸಲ್ಯೂಟ್ ಸಿಗುತ್ತೆ, ಲಾಠಿ ಚಾರ್ಜ್ ಒದೆಯೂ ಸಿಗುತ್ತೆ. ಗುಂಡು ಹಾರಿಸುವುದಕ್ಕೂ ರೆಡಿ. ಯಾರಿಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾರ್ಮಿಕವಾಗಿ ಹೇಳಿದರು.

    ವಿಧಾನಸೌಧದಲ್ಲಿ ಕಚೇರಿ ಕೊಠಡಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಜತೆಗೆ ಪರಿಶುದ್ಧ ಆಡಳಿತ ನೀಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಅದೇ ಕಿವಿಮಾತು ಹೇಳಿದ್ದಾರೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದರು.

    ಇದನ್ನೂ ಓದಿ: 45ರ ಶಿಕ್ಷಕಿ 25ರ ಯುವಕನ ನಡುವೆ ಮಿಸ್​ಕಾಲ್​ನಿಂದ ಶುರುವಾದ ಸಂಬಂಧ ಇಬ್ಬರ ಸಾವಿನೊಂದಿಗೆ ಅಂತ್ಯ!

    ಪ್ರಮೇಯ ಬರಲಾರದು

    ರಾಜ್ಯದ ಶಾಂತಿ, ಸುವ್ಯವಸ್ಥೆ ಕದಡುವ ಯಾವುದೇ ವ್ಯಕ್ತಿ, ಸಂಘಸಂಸ್ಥೆಗಳ ವಿರುದ್ಧ ಕಾನೂನು ಪ್ರಕಾರ ಕ್ರಮವಹಿಸಲಾಗುವುದು. ಪಕ್ಷದ ಚುನಾವಣಾ ಪ್ರಣಾಳಿಕೆ ಸ್ಪಷ್ಟವಾಗಿದೆ. ಶಾಂತಿ, ಸುವ್ಯವಸ್ಥೆಗೆ ಭಂಗ ತರುವವರು, ಬಜರಂಗದಳವು ಸೇರಿ ಕಾನೂನು ಕ್ರಮವಹಿಸಲಾಗುತ್ತದೆ‌ ಅಂತಹ ಸಂಘಟನೆಗಳನ್ನು ನಿಷೇಧಿಸುವ ವಿಷಯವೂ ಪ್ರಸ್ತಾಪಿಸಿದ್ದು, ರಾಜ್ಯದಲ್ಲಿ ಅಂತಹ ಪ್ರಮೇಯ ಬರಲಾರದು ಎಂಬ ವಿಶ್ವಾಸವಿದೆ. ಬರಬಾರದು ಎಂದು ಆಶಿಸುವುದಾಗಿ ಪರಮೇಶ್ವರ್ ಹೇಳಿದರು.

    ಪಿಎಸ್ಐ ನೇಮಕ ಅಕ್ರಮ ಪ್ರಕರಣವು ಹೈಕೋರ್ಟ್​ನಲ್ಲಿ ವಿಚಾರಣೆಯಲ್ಲಿದ್ದು, ಅಗತ್ಯ ಕಾನೂನು ಕ್ರಮಗಳ ಕುರಿತು ಅಡ್ವೋಕೇಟ್ ಜನರಲ್ ಜತೆಗೆ ಚರ್ಚಿಸಲಾಗುವುದು. ಜತೆಗೆ ತಪ್ಪಿತಸ್ಥರ ವಿರುದ್ಧ ತಕ್ಕ ಕಾನೂನು ಕ್ರಮವಾಗುವಂತೆ ನೋಡಿಕೊಳ್ಳಲು ಸರ್ಕಾರ ಬದ್ಧವೆಂದು ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.

    ಉಚಿತ ಶಿಕ್ಷಣ ಕೊಡಿಸುವ ನೆಪದಲ್ಲಿ ಸಾಲ ಪಡೆದು ಕೋಟಿ ಕೋಟಿ ವಂಚನೆ!

    ಭೋಗಾಪುರದಲ್ಲಿ ಜೆಟ್ ವಿಮಾನ ಪತನ; ಪ್ಯಾರಾಚೂಟ್ ಬಳಸಿ ಇಬ್ಬರು ಪೈಲಟ್​ಗಳು ಪ್ರಾಣಾಪಾಯದಿಂದ ಪಾರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts