Friday, 16th November 2018  

Vijayavani

Breaking News

ಹಳೇ ಮನೆಗೆ ಹೊಸ ಮನೆ!

Saturday, 16.06.2018, 3:05 AM       No Comments

ವಿನಿಮಯ ಕೊಡುಗೆ ಈಗ ರಿಯಾಲ್ಟಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಇದಕ್ಕಾಗಿ ದೊಡ್ಡ ದೊಡ್ಡ ಬಿಲ್ಡರ್​ಗಳು ಸಿದ್ಧತೆ ಆರಂಭಿಸಿದ್ದಾರೆ. ಹೀಗಾಗಿ ಹಳೆಯ ಮನೆಗೆ ಹೊಸ ಮನೆಯನ್ನು ವಿನಿಮಯ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಇದರಿಂದ ಹಳೇ ಮನೆ ಹೊಂದಿರುವ ಹಲವರಿಗೆ ಹೊಸ ಮನೆಯ ಮಾಲೀಕರಾಗುವ ಸುಯೋಗ ಬಂದಿದೆ. ಇಂತಹದೊಂದು ಎಕ್ಸ್​ಚೇಂಜ್ ಆಫರ್ ದೇಶದಲ್ಲೇ ಮೊದಲು.

|ವರುಣ ಹೆಗಡೆ

ಬೆಂಗಳೂರು: ಹಳೇ ಬೈಕು, ಕಾರು ಕೊಟ್ಟು ಹೊಸ ಬೈಕು, ಕಾರು ಪಡೆಯಲು ಅವಕಾಶವಿರುವಂತೆ ಹಳೆ ಮನೆ ಕೊಟ್ಟು ಹೊಸ ಮನೆ ಪಡೆಯುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಬಹುತೇಕರು ಹಲವು ಬಾರಿ ಅಂದುಕೊಂಡಿರಬಹುದು.

ಹೌದು ಅಂದುಕೊಂಡಿದ್ದೆಲ್ಲ ಈಡೇರುವ ಕಾಲವಿದು. ಇಂತಹದೊಂದು ವಿನಿಮಯ ಯೋಜನೆ ದೇಶದಲ್ಲೇ ಮೊದಲ ಬಾರಿ ಬೆಂಗಳೂರಿನಲ್ಲಿ ಜಾರಿಗೆ ಬರಲಿದ್ದು, ಅದಕ್ಕೆ ಬೇಕಾದ ಸಿದ್ಧತೆ ನಡೆಯುತ್ತಿದೆ.

ಎಷ್ಟೋ ವರ್ಷಗಳ ಹಿಂದೆ ಕಟ್ಟಿದ ಮನೆಯನ್ನು ಪುನಃ ನವೀಕರಣ ಮಾಡಲಾಗದೆ ಮೂಲಸೌಕರ್ಯ ಸೇರಿ ವಿವಿಧ ಸಮಸ್ಯೆಯಿಂದ ಸದಾ ಕಿರಿಕಿರಿ ಎದುರಿಸುತ್ತಿರುವ ನಗರದ ಜನ ತಮ್ಮ ಹಳೇ ಮನೆಯನ್ನು ಇನ್ನೊಂದು ಹೊಸ ಮನೆಯೊಂದಿಗೆ ಬದಲಾವಣೆ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಹಳೇ ಮನೆ ಎಂಬ ಬೇಸರದ ಜತೆಗೆ ಸ್ವಂತ ಮನೆ ಎಂಬ ಕಾರಣಕ್ಕೆ ನಿಮಗಿಷ್ಟವಿಲ್ಲದ ಏರಿಯಾದಲ್ಲೇ ವಾಸ ಮಾಡಬೇಕೆಂಬ ಅನಿವಾರ್ಯ ಸ್ಥಿತಿಯೂ ಇನ್ನು ಮುಂದೆ ಇರುವುದಿಲ್ಲ.

ಕಾರು, ಬೈಕ್, ಎಲೆಕ್ಟ್ರಾನಿಕ್ ಉಪಕರಣಗಳು ಹಳೆಯದಾದಾಗ ಸಾಮಾನ್ಯವಾಗಿ ಮಾರುಕಟ್ಟೆಗೆ ಬಂದ ಹೊಸ ಉಪಕರಣದೊಂದಿಗೆ ಬದಲು ಮಾಡಿಕೊಳ್ಳುತ್ತೇವೆ. ಅಷ್ಟೇ ಏಕೆ, ನಮ್ಮ ಬಳಿಯಿರುವ ವಸ್ತು ಮನಸ್ಸಿಗೆ ತೃಪ್ತಿ ನೀಡದಿದ್ದರೆ ಕೂಡ ಗ್ರಾಹಕರಿಗೆ ಹುಡುಕಾಟ ನಡೆಸುತ್ತಾ ಸಮಯ ಕಳೆಯುವ ಬದಲು ನೇರವಾಗಿ ಮಾರುಕಟ್ಟೆಗೆ ತೆರಳಿ, ಹೊಸ ವಸ್ತುವಿನ ಹೆಚ್ಚುವರಿ ಮೌಲ್ಯವನ್ನು ಪಾವತಿಸುವ ಮೂಲಕ ನಮ್ಮಿಷ್ಟದ ವಸ್ತುವನ್ನು ಖರೀದಿಸುತ್ತೇವೆ. ಇದೇ ಮಾದರಿಯಲ್ಲಿ ನಗರದಲ್ಲಿ ಮನೆಗಳನ್ನು ಬದಲಾಯಿಸಿಕೊಳ್ಳ ಬಹುದಾಗಿದೆ. ನಗರದ ಜನರಿಗೆ ಹೊಸ ಮನೆಯ ಕೊಡುಗೆ ನೀಡಲು ಪ್ರತಿಷ್ಠಿತ ಬಿಲ್ಡರ್​ಗಳು ಸಿದ್ಧರಾಗಿದ್ದಾರೆ.

ಮನೆ ಮೇಲ್ದರ್ಜೆಗೇರಿಸಲು ಸಹಕಾರಿ

ದೊಡ್ಡ ಮನೆ ಹೊಂದಬೇಕೆಂದು ಕನಸು ಕಾಣುತ್ತಿರುವ ಜನರಿಗೂ ಮನೆ ಬದಲಾವಣೆ ಯೋಜನೆ ಆಶಾಕಿರಣವಾಗಿದೆ. ಅಷ್ಟೇ ಅಲ್ಲ, ವಾಸ್ತು, ಸಾರಿಗೆ, ಶಿಕ್ಷಣ ಸೌಲಭ್ಯ ವಂಚಿತ ಪ್ರದೇಶದಲ್ಲಿರುವವರು ಸಹ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಸದ್ಯ ವಾಸವಾಗಿರುವ ಮನೆಯ ಮಾರುಕಟ್ಟೆ ಬೆಲೆ ಹಾಗೂ ಬದಲಾಯಿಸುತ್ತಿರುವ ಮನೆಯ ಮಾರುಕಟ್ಟೆ ಬೆಲೆಯ ಅಂತರದ ಮೌಲ್ಯವನ್ನು ಮಾತ್ರ ಪಾವತಿಸಿ, ನೂತನ ಮನೆ ಗೃಹಪ್ರವೇಶ ಮಾಡಬಹುದು. ಈ ಪ್ರಕ್ರಿಯೆ ಕೂಡ ಸರಳವಾಗಿದ್ದು, ಅಲ್ಪ ಸಮಯದಲ್ಲಿಯೆ ಮನೆ ಬದಲಾವಣೆ ಸಾಧ್ಯ. ಈ ಯೋಜನೆ ಪರಿಣಾಮಕಾರಿಯಾಗಿ ಜಾರಿ ಮಾಡಲು ಬಿಲ್ಡರ್​ಗಳು ಪ್ರಮುಖ ಬ್ಯಾಂಕು, ಮುಂಚೂಣಿಯಲ್ಲಿರುವ ರಿಯಲ್ ಎಸ್ಟೇಟ್ ಪೋರ್ಟಲ್​ಗಳ ಜತೆಗೆ ಕೈ ಜೋಡಿಸುವ ಪ್ರಕ್ರಿಯೆ ಆರಂಭಿಸಿವೆ. ಇನ್ನು ಕೆಲವೇ ದಿನಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ.

ಎಡವಿದವರಿಗೆ ಎಚ್ಚೆತ್ತುಕೊಳ್ಳಲು ಸಹಕಾರಿ

ಬ್ರೋಕರ್​ಗಳು ನೀಡುವ ತಪು್ಪ ಮಾಹಿತಿಯಿಂದ ಹಲವರು ಮೋಸದ ಜಾಲಕ್ಕೆ ಸಿಲುಕಿ, ಪ್ರತಿನಿತ್ಯ ಸಮಸ್ಯೆ ಎದುರಿಸುವ ಸಾಧ್ಯತೆಯಿರುತ್ತದೆ. ಹೀಗೆ ನೂತನ ಮನೆ ಪ್ರವೇಶಿಸಿದ ಬಳಿಕ ಖುಷಿ ಕಳೆದುಕೊಂಡವರು ಎಚ್ಚರಿಕೆಯಿಂದ ಮನೆ ಬದಲಾಯಿಸಿಕೊಳ್ಳಲು ಸಕಾಲವಾಗಿದೆ. ನಮ್ಮ ಆಯ್ಕೆಯ ಪ್ರದೇಶದಲ್ಲಿ ಎಷ್ಟು ಮನೆ ಲಭ್ಯವಿದೆ ಎಂದು ಪರಿಶೀಲಿಸಿ, ಸರಿ ಹೊಂದುವ ಮನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಮೂಲಕ ಹೊಸ ಪರಿಸರದಲ್ಲಿ ನವೀನ ಕನಸುಗಳೊಂದಿಗೆ ಜೀವನ ನಡೆಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಸಂರ್ಪಸಿ: 7625035490

ಬೆಂಗಳೂರಿನ ಪ್ರತಿ 10 ನಿವಾಸಿಗಳಲ್ಲಿ 8 ಜನರು ತಮ್ಮ ಹಾಲಿ ಆಸ್ತಿ ಮಾರಲು ಬಯಸಿದ್ದಾರೆ. ಹೆಚ್ಚಿನವರು ಮಾರುಕಟ್ಟೆ ಬೆಲೆ ಬಗ್ಗೆ ಸೂಕ್ತ ಮಾಹಿತಿ ಸಿಗದ್ದರಿಂದ ತಮಗೆ ಬೇಕಾದ ಮನೆ ಖರೀದಿಸುವಲ್ಲಿ ವಿಫಲರಾಗಿದ್ದಾರೆ. ಮನೆ ಬದಲಾವಣೆ ಯೋಜನೆ ತಮಗಿಷ್ಟವಾದ ಮನೆ ಖರೀದಿಗೆ ಉತ್ತಮ ಅವಕಾಶವಾಗಿದೆ.

| ಆನಂದ್ ನಾರಾಯಣ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಪುರವಂಕರ ಲಿಮಿಟೆಡ್

Leave a Reply

Your email address will not be published. Required fields are marked *

Back To Top