ಪಾಂಟಿಂಗ್, ಗಂಗೂಲಿ ಮಾರ್ಗದರ್ಶನದ ಲಾಭ

ಜೈಪುರ: ಮುಖ್ಯ ಕೋಚ್ ರಿಕಿ ಪಾಂಟಿಂಗ್, ಸಲಹೆಗಾರ ಸೌರವ್ ಗಂಗೂಲಿ ಮತ್ತು ಸಹಾಯಕ ಕೋಚ್ ಮೊಹಮದ್ ಕೈಫ್ ಮಾರ್ಗದರ್ಶನದಿಂದ ತಂಡಕ್ಕೆ ಸಾಕಷ್ಟು ಲಾಭ ದೊರೆತಿದೆ. ಅವರ ಉಪಸ್ಥಿತಿಯಿಂದ ತಂಡಕ್ಕೆ ಹೆಚ್ಚಿನ ಬಲ ಬಂದಿದೆ ಎಂದು ಯುವ ಆರಂಭಿಕ ಪೃಥ್ವಿ ಷಾ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯಶಸ್ಸಿನ ಗುಟ್ಟು ಬಿಚ್ಚಿಟ್ಟಿದ್ದಾರೆ. ರಾಜಸ್ಥಾನ ರಾಯಲ್ಸ್ ಎದುರು ಸೋಮವಾರ ನಡೆದ ಐಪಿಎಲ್-12ರ ಪಂದ್ಯದಲ್ಲಿ 6 ವಿಕೆಟ್ ಜಯ ಕಂಡ ಡೆಲ್ಲಿ 2012ರ ಬಳಿಕ ಮೊದಲ ಬಾರಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕ್ಕೇರಿತು. ಟೂರ್ನಿಯಲ್ಲಿ ಕಂಡ 7ನೇ ಜಯದೊಂದಿಗೆ ಡೆಲ್ಲಿ ತಂಡ 2012ರ ಬಳಿಕ ಮೊದಲ ಬಾರಿ ಪ್ಲೇಆಫ್ ಹಂತಕ್ಕೇರುವ ಸನಿಹದಲ್ಲಿದೆ.

ಅಜಿಂಕ್ಯ ರಹಾನೆ (105*) ಶತಕದ ಬಲದಿಂದ ರಾಯಲ್ಸ್ 6 ವಿಕೆಟ್​ಗೆ 191 ರನ್ ಪೇರಿಸಿತು. ಪ್ರತಿಯಾಗಿ ಡೆಲ್ಲಿ ತಂಡ ಶಿಖರ್ ಧವನ್ (54 ರನ್, 27 ಎಸೆತ, 8 ಬೌಂಡರಿ, 2 ಸಿಕ್ಸರ್) ಒದಗಿಸಿಕೊಟ್ಟ ಬಿರುಸಿನ ಆರಂಭ, ಪೃಥ್ವಿ ಷಾ (42) ಉಪಯುಕ್ತ ಆಟ ಮತ್ತು ರಿಷಭ್ ಪಂತ್ (78* ರನ್, 36 ಎಸೆತ, 6 ಬೌಂಡರಿ, 4 ಸಿಕ್ಸರ್) ಜವಾಬ್ದಾರಿಯು ಬ್ಯಾಟಿಂಗ್ ನೆರವಿನಿಂದ 19.2 ಓವರ್​ಗಳಲ್ಲಿ 4 ವಿಕೆಟ್​ಗೆ 193 ರನ್ ಪೇರಿಸಿ ಜಯಿಸಿತು. ‘ರಿಕಿ, ಸೌರವ್, ಕೈಫ್ ಸರ್ ತಂಡದ ಜತೆಗಿದ್ದಾಗ ನಮ್ಮ ವಿಶ್ವಾಸ ವೃದ್ಧಿಯಾಗುತ್ತದೆ. ನಾವು ಅನನುಭವಿ ಆಟಗಾರರೆಂದೇ ಎನಿಸುತ್ತಿಲ್ಲ. ಸೌರವ್ ಸರ್ ನಮ್ಮೊಂದಿಗೇ ಕುಳಿತು ಊಟ ಮಾಡುತ್ತಾರೆ. ತಂಡದಲ್ಲಿ ಉತ್ತಮ ಸಂಬಂಧ ವೃದ್ಧಿಯಾಗಿದೆ’ ಎಂದು ಪೃಥ್ವಿ ಷಾ ಹೇಳಿದ್ದಾರೆ.

ರಾಯಲ್ಸ್ ಹಾದಿ ಕಠಿಣ: ಆರ್​ಸಿಬಿ ತಂಡದಂತೆ 10ರಲ್ಲಿ 7 ಪಂದ್ಯ ಸೋತಿರುವ ರಾಜಸ್ಥಾನ ರಾಯಲ್ಸ್ ತಂಡದ ಪ್ಲೇಆಫ್ ಹಾದಿಯೂ ದುರ್ಗಮಗೊಂಡಿದೆ. ಉಳಿದ ಎಲ್ಲ 4 ಪಂದ್ಯ ಗೆದ್ದರೂ, ರಾಯಲ್ಸ್ ತಂಡದ ಭವಿಷ್ಯ ಟೂರ್ನಿಯ ಇತರ ಪಂದ್ಯಗಳ ಫಲಿತಾಂಶ ಮತ್ತು ರನ್​ರೇಟ್ ಸುಧಾರಣೆಯನ್ನೂ ಅವಲಂಬಿಸಿರುತ್ತದೆ. -ಏಜೆನ್ಸೀಸ್

ವಿಶ್ವಕಪ್​ಗೆ ಆಯ್ಕೆ ಆಗದ ನೋವು ಇನ್ನೂ ಮನಸ್ಸಿನಲ್ಲಿದೆ. ಆದರೆ ಈ ಪಂದ್ಯದ ಮೇಲೆ ಗಮನ ಕೇಂದ್ರೀಕರಿಸಿದ್ದೆ. ಗೆಲುವಿನ ಬಳಿಕ ಸೌರವ್ (ಗಂಗೂಲಿ) ಸರ್ ಬಂದು ನನ್ನನ್ನು ಎತ್ತಿಕೊಂಡಾಗ ವಿಶೇಷ ಅನುಭವವಾಯಿತು.

| ರಿಷಭ್ ಪಂತ್, ಪಂದ್ಯಶ್ರೇಷ್ಠ

ರಾಜಸ್ಥಾನ ರಾಯಲ್ಸ್: 6 ವಿಕೆಟ್​ಗೆ 191

ಡೆಲ್ಲಿ ಕ್ಯಾಪಿಟಲ್ಸ್: 19.2 ಓವರ್​ಗಳಲ್ಲಿ 4 ವಿಕೆಟ್​ಗೆ 193

ಪೃಥ್ವಿ ಷಾ ಸಿ ಪರಾಗ್ ಬಿ ಶ್ರೇಯಸ್ 42

ಧವನ್ ಸ್ಟಂಪ್ ಸ್ಯಾಮ್ಸನ್ ಬಿ ಶ್ರೇಯಸ್ 54

ಶ್ರೇಯಸ್ ಅಯ್ಯರ್ ಸಿ ಸ್ಟೋಕ್ಸ್ ಬಿ ಪರಾಗ್ 4

ರಿಷಭ್ ಪಂತ್ ಅಜೇಯ 78

ರುದರ್​ಫೋರ್ಡ್ ಸಿ ಪರಾಗ್ ಬಿ ಧವಳ್ 11

ಕಾಲಿನ್ ಇನ್​ಗ್ರಾಮ್ ಔಟಾಗದೆ 3

ಇತರ: 1, ವಿಕೆಟ್ ಪತನ: 1-72, 2-77, 3-161, 4-175. ಬೌಲಿಂಗ್: ಸ್ಟುವರ್ಟ್ ಬಿನ್ನಿ 1-0-3-0, ಧವಳ್ ಕುಲಕರ್ಣಿ 4-0-51-1, ಜೈದೇವ್ ಉನಾದ್ಕತ್ 3.2-0-36-0, ಶ್ರೇಯಸ್ ಗೋಪಾಲ್ 4-0-47-2, ಜೋಫ್ರಾ ಆರ್ಚರ್ 4-0-31-0, ರಿಯಾನ್ ಪರಾಗ್ 3-0-25-1.