ಬೆಂಗಳೂರು: ‘ಕೆಜಿಎಫ್ 2′ ರಿಲೀಸ್ಗೆ ಇನ್ನೇನು ಮೂರೇ ದಿನ ಉಳಿದಿದೆ. ಇತ್ತ ಐಪಿಎಲ್ 2022 ಭರಾಟೆಯಿಂದ ಸಾಗುತ್ತಿದೆ. ಈಗಾಗಲೇ, ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಬ್ಬರವೂ ಜೋರಾಗಿದೆ. ಇನ್ನು, ‘ಕೆಜಿಎಫ್ 2′ ಮತ್ತು ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ಎರಡಕ್ಕೂ ಕರುನಾಡಲ್ಲಿ ಅಭಿಮಾನಿಗಳ ಕ್ರೇಜ್ ಈಗಾಗಲೇ ಬಹಳಷ್ಟು ಇದೆ. ಈ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ‘ಕೆಜಿಎಫ್ 2′ ಸಿನಿಮಾ ನಿರ್ಮಾಪಕರಾಗಿರುವ ಹೊಂಬಾಳೆ ಫಿಲ್ಮ್ಸ್ ಒಂದು ಭರ್ಜರಿ ಘೋಷಣೆ ಮಾಡಿವೆ. ಏನದು ಅಂತೀರಾ…? ಅಂದಹಾಗೆ, ಇದು ಕ್ರೀಡೆ ಮತ್ತು ಚಲನಚಿತ್ರ ಸೇರಿದ ಮನರಂಜನೆಯ ಪರಿಪೂರ್ಣ ಸಮ್ಮಿಲನವನ್ನು ಉಣಬಡಿಸಲಿರುವ ಬಗೆಗಿನ ಸುದ್ದಿ. ಹೌದು, ಹೊಂಬಾಳೆ ಫಿಲ್ಮ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರಸ್ಪರ ಕೈಜೋಡಿಸುವ ಮೂಲಕ ಕ್ರೀಡೆ ಮತ್ತು ಚಲನಚಿತ್ರದ ಮನರಂಜನೆಯನ್ನು ಒಟ್ಟಿಗೆ ಪ್ರೇಕ್ಷಕರಿಗೆ ನೀಡಲಿವೆ. ಈ ಸಹಯೋಗವು ಚಲನಚಿತ್ರ ಹಾಗೂ ಕ್ರೀಡೆಯ ಸಂಗಮವನ್ನುಂಟು ಮಾಡಲಿದ್ದು, ಎಲ್ಲರಿಗೂ ಭರಪೂರ ಮನೋರಂಜನೆ ನೀಡಲಿದೆ ಎನ್ನಬಹುದು.
#ನಮ್ಮHombale is proud & ecstatic to associate with #ನಮ್ಮRCB
Together let’s usher into a new era of entertainment with infinite possibilities @RCBTweets @VKiragandur
Born in Bangalore to thrill the nation#RCBxHombale pic.twitter.com/jDJy1wcsVT— Hombale Films (@hombalefilms) April 10, 2022
Contents
ಬೆಂಗಳೂರು: ‘ಕೆಜಿಎಫ್ 2′ ರಿಲೀಸ್ಗೆ ಇನ್ನೇನು ಮೂರೇ ದಿನ ಉಳಿದಿದೆ. ಇತ್ತ ಐಪಿಎಲ್ 2022 ಭರಾಟೆಯಿಂದ ಸಾಗುತ್ತಿದೆ. ಈಗಾಗಲೇ, ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಬ್ಬರವೂ ಜೋರಾಗಿದೆ. ಇನ್ನು, ‘ಕೆಜಿಎಫ್ 2′ ಮತ್ತು ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ಎರಡಕ್ಕೂ ಕರುನಾಡಲ್ಲಿ ಅಭಿಮಾನಿಗಳ ಕ್ರೇಜ್ ಈಗಾಗಲೇ ಬಹಳಷ್ಟು ಇದೆ. ಈ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ‘ಕೆಜಿಎಫ್ 2′ ಸಿನಿಮಾ ನಿರ್ಮಾಪಕರಾಗಿರುವ ಹೊಂಬಾಳೆ ಫಿಲ್ಮ್ಸ್ ಒಂದು ಭರ್ಜರಿ ಘೋಷಣೆ ಮಾಡಿವೆ. ಏನದು ಅಂತೀರಾ…? ಅಂದಹಾಗೆ, ಇದು ಕ್ರೀಡೆ ಮತ್ತು ಚಲನಚಿತ್ರ ಸೇರಿದ ಮನರಂಜನೆಯ ಪರಿಪೂರ್ಣ ಸಮ್ಮಿಲನವನ್ನು ಉಣಬಡಿಸಲಿರುವ ಬಗೆಗಿನ ಸುದ್ದಿ. ಹೌದು, ಹೊಂಬಾಳೆ ಫಿಲ್ಮ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರಸ್ಪರ ಕೈಜೋಡಿಸುವ ಮೂಲಕ ಕ್ರೀಡೆ ಮತ್ತು ಚಲನಚಿತ್ರದ ಮನರಂಜನೆಯನ್ನು ಒಟ್ಟಿಗೆ ಪ್ರೇಕ್ಷಕರಿಗೆ ನೀಡಲಿವೆ. ಈ ಸಹಯೋಗವು ಚಲನಚಿತ್ರ ಹಾಗೂ ಕ್ರೀಡೆಯ ಸಂಗಮವನ್ನುಂಟು ಮಾಡಲಿದ್ದು, ಎಲ್ಲರಿಗೂ ಭರಪೂರ ಮನೋರಂಜನೆ ನೀಡಲಿದೆ ಎನ್ನಬಹುದು.ಈ ಸಹಭಾಗಿತ್ವವನ್ನು ಉದ್ದೇಶಿಸಿ ಹೊಂಬಾಳೆ ಫಿಲ್ಮ್ಸ್ ಸಂಸ್ಥಾಪಕರಾದ ವಿಜಯ್ ಕಿರಂಗಂದೂರು ಅವರು, “ಸಿನಿಮಾ ಮಾಡುವುದು ನನ್ನ ಪ್ಯಾಷನ್. ಕ್ರಿಕೆಟ್ ಪ್ರೇಮಿಯಾಗಿ ಮತ್ತು ಕನ್ನಡಿಗನಾಗಿ ಕ್ರಿಕೆಟ್ ನನ್ನನ್ನು ಯಾವಾಗಲೂ ಆಕರ್ಷಿಸುತ್ತಿದೆ. ನಮ್ಮ ಅಭಿಮಾನಿಗಳಿಗೆ ಭರಪೂರ ಮನರಂಜನೆ ಮತ್ತು ಥ್ರಿಲ್ ಅನ್ನು ಖಚಿತಪಡಿಸಿಕೊಳ್ಳಲು ತೊಡಗಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಮತ್ತು ಆರ್‌ಸಿಬಿ ಎರಡಕ್ಕೂ ನಮ್ಮ ಬೆಂಗಳೂರೇ ತವರಾಗಿರುವುದರಿಂದ ಈ ಪಾಲುದಾರಿಕೆ ಸಹಜವಾಗಿದೆ. ಸ್ವಲ್ಪ ಸಮಯದಿಂದ ಈ ಸಹಯೋಗದ ಬಗ್ಗೆ ಕೆಲಸ ಮಾಡುತ್ತಿರುವ ನಾವು ಈ ಬಗ್ಗೆ ತುಂಬಾ ಉತ್ಸುಕರಾಗಿದ್ದೇವೆ, 2022 ನಮ್ಮೆಲ್ಲರಿಗೂ ರಾಯಲ್ ಆಗಿರಲಿದೆ. ಕ್ರೀಡೆ ಮತ್ತು ಮನರಂಜನೆ ವಿಚಾರದಲ್ಲಿ ಕ್ಷಣಮಾತ್ರದಲ್ಲಿ ಬದಲಾಗುವ ಅಭಿಮಾನಿಗಳ ನಡವಳಿಕೆ ಮತ್ತು ಆದ್ಯತೆಗಳನ್ನು ಅರಿತು ಅವರ ನಾಡಿಮಿಡಿತಕ್ಕೆ ಬಲ ನೀಡುವ ಜತೆ ಹೊಸ ಮನರಂಜನಾ ಮಾರ್ಗಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸುವ ಮೂಲಕ ಈ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಪ್ರಸರಣ ಉದ್ಯಮಕ್ಕೆ ಕೊಡುಗೆ ನೀಡುವ ಗುರಿ ಹೊಂದಿದ್ದೇವೆ. ಇದಕ್ಕಾಗಿ, ಕೈ ಜೋಡಿಸಲು, ಆರಂಭಿಸಲು ಮತ್ತು ರಾಯಲ್ ಆಗಿ ಸೆಲಬ್ರೇಟ್ ಮಾಡಲು ಎದುರು ನೋಡುತ್ತಿದ್ದೇವೆ. ಕ್ರೀಡೆ ಮತ್ತು ಚಲನಚಿತ್ರ ಮನರಂಜನಾ ವಲಯದಲ್ಲಿ ನಮ್ಮ ಅಭಿಮಾನಿಗಳಿಗೆ ಮ್ಯಾಜಿಕ್ ಮೂಮೆಂಟ್‌ಗಳನ್ನು ಸೃಷ್ಟಿಸಲು ನಾವು ಒಟ್ಟಾಗಿ ಪ್ರಯತ್ನಿಸುತ್ತೇವೆ”, ಎಂದಿದ್ದಾರೆ. ಈ ಬಗ್ಗೆ ನಿನ್ನೆಯೇ ಮಾಹಿತಿ ನೀಡಲಿದ್ದೇವೆ ಎಂಬುದನ್ನು ಘೋಷಿಸಲಾಗಿತ್ತು. ಹೌದು, ಅನಂತ ಸಾಧ್ಯತೆಗಳ ಹೊಸ ಯುಗಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿವೆ ಹೊಂಬಾಳೆ ಫಿಲ್ಮ್ಸ್ ಮತ್ತು ಆರ್‌ಸಿಬಿ. ಈ ಸಹಭಾಗಿತ್ವವು ಖಂಡಿತವಾಗಿಯೂ ಚಲನಚಿತ್ರ ಮನರಂಜನೆ ಮತ್ತು ಕ್ರೀಡಾ ಉದ್ಯಮದ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ಮುನ್ನುಡಿ ಬರೆಯಲಿದೆ ಎನ್ನಬಹುದು. ಈ ಎರಡು ದಿಗ್ಗಜ ಸಂಸ್ಥೆಗಳ ಸಂಗಮವು ಐಪಿಎಲ್ ಆರಂಭದಿಂದ ಶುರುವಾದ ಥ್ರಿಲ್ ಹಾಗೂ ರೋಮಾಂಚನಕಾರಿ ಅನುಭವದ ಹೊಸ ಸಾಧ್ಯತೆಗಳಿಗೆ ಮುನ್ನುಡಿ ಬರೆಯುವ ಭರವಸೆ ಮೂಡಿಸಲಿವೆ. ಹೊಂಬಾಳೆ ಫಿಲ್ಮ್ಸ್ ಅತ್ಯಂತ ಪ್ರಮುಖ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ ಹಾಗೂ ಆರ್‌ಸಿಬಿ ಐಪಿಎಲ್‌ನ ಅತ್ಯಂತ ನೆಚ್ಚಿನ ತಂಡವಾಗಿದೆ. ಹಾಗಾಗಿ, ಈ ಸಹಯೋಗ ಅತ್ಯಂತ ರೋಮಾಂಚನಕಾರಿಯಾಗಿರಲಿದ್ದು ಅಭಿಮಾನಿಗಳಿಗೆ ಒಂದು ಮರೆಯಲಾಗದ ಅನುಭವ ನೀಡಲಿದೆ.
ಈ ಸಹಭಾಗಿತ್ವವನ್ನು ಉದ್ದೇಶಿಸಿ ಹೊಂಬಾಳೆ ಫಿಲ್ಮ್ಸ್ ಸಂಸ್ಥಾಪಕರಾದ ವಿಜಯ್ ಕಿರಂಗಂದೂರು ಅವರು, “ಸಿನಿಮಾ ಮಾಡುವುದು ನನ್ನ ಪ್ಯಾಷನ್. ಕ್ರಿಕೆಟ್ ಪ್ರೇಮಿಯಾಗಿ ಮತ್ತು ಕನ್ನಡಿಗನಾಗಿ ಕ್ರಿಕೆಟ್ ನನ್ನನ್ನು ಯಾವಾಗಲೂ ಆಕರ್ಷಿಸುತ್ತಿದೆ. ನಮ್ಮ ಅಭಿಮಾನಿಗಳಿಗೆ ಭರಪೂರ ಮನರಂಜನೆ ಮತ್ತು ಥ್ರಿಲ್ ಅನ್ನು ಖಚಿತಪಡಿಸಿಕೊಳ್ಳಲು ತೊಡಗಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಮತ್ತು ಆರ್‌ಸಿಬಿ ಎರಡಕ್ಕೂ ನಮ್ಮ ಬೆಂಗಳೂರೇ ತವರಾಗಿರುವುದರಿಂದ ಈ ಪಾಲುದಾರಿಕೆ ಸಹಜವಾಗಿದೆ. ಸ್ವಲ್ಪ ಸಮಯದಿಂದ ಈ ಸಹಯೋಗದ ಬಗ್ಗೆ ಕೆಲಸ ಮಾಡುತ್ತಿರುವ ನಾವು ಈ ಬಗ್ಗೆ ತುಂಬಾ ಉತ್ಸುಕರಾಗಿದ್ದೇವೆ, 2022 ನಮ್ಮೆಲ್ಲರಿಗೂ ರಾಯಲ್ ಆಗಿರಲಿದೆ. ಕ್ರೀಡೆ ಮತ್ತು ಮನರಂಜನೆ ವಿಚಾರದಲ್ಲಿ ಕ್ಷಣಮಾತ್ರದಲ್ಲಿ ಬದಲಾಗುವ ಅಭಿಮಾನಿಗಳ ನಡವಳಿಕೆ ಮತ್ತು ಆದ್ಯತೆಗಳನ್ನು ಅರಿತು ಅವರ ನಾಡಿಮಿಡಿತಕ್ಕೆ ಬಲ ನೀಡುವ ಜತೆ ಹೊಸ ಮನರಂಜನಾ ಮಾರ್ಗಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸುವ ಮೂಲಕ ಈ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಪ್ರಸರಣ ಉದ್ಯಮಕ್ಕೆ ಕೊಡುಗೆ ನೀಡುವ ಗುರಿ ಹೊಂದಿದ್ದೇವೆ. ಇದಕ್ಕಾಗಿ, ಕೈ ಜೋಡಿಸಲು, ಆರಂಭಿಸಲು ಮತ್ತು ರಾಯಲ್ ಆಗಿ ಸೆಲಬ್ರೇಟ್ ಮಾಡಲು ಎದುರು ನೋಡುತ್ತಿದ್ದೇವೆ. ಕ್ರೀಡೆ ಮತ್ತು ಚಲನಚಿತ್ರ ಮನರಂಜನಾ ವಲಯದಲ್ಲಿ ನಮ್ಮ ಅಭಿಮಾನಿಗಳಿಗೆ ಮ್ಯಾಜಿಕ್ ಮೂಮೆಂಟ್‌ಗಳನ್ನು ಸೃಷ್ಟಿಸಲು ನಾವು ಒಟ್ಟಾಗಿ ಪ್ರಯತ್ನಿಸುತ್ತೇವೆ”, ಎಂದಿದ್ದಾರೆ. ಈ ಬಗ್ಗೆ ನಿನ್ನೆಯೇ ಮಾಹಿತಿ ನೀಡಲಿದ್ದೇವೆ ಎಂಬುದನ್ನು ಘೋಷಿಸಲಾಗಿತ್ತು.
The confluence of two dreams! A coming together of sports, movies, lifestyle, content and more. Watch this space tomorrow at 11:15 AM.#PlayBold #WeAreChallengers #IPL2022 #Mission2022 #RCB #ನಮ್ಮRCB pic.twitter.com/aLEaUMDEtf
— Royal Challengers Bangalore (@RCBTweets) April 9, 2022
ಹೌದು, ಅನಂತ ಸಾಧ್ಯತೆಗಳ ಹೊಸ ಯುಗಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿವೆ ಹೊಂಬಾಳೆ ಫಿಲ್ಮ್ಸ್ ಮತ್ತು ಆರ್‌ಸಿಬಿ. ಈ ಸಹಭಾಗಿತ್ವವು ಖಂಡಿತವಾಗಿಯೂ ಚಲನಚಿತ್ರ ಮನರಂಜನೆ ಮತ್ತು ಕ್ರೀಡಾ ಉದ್ಯಮದ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ಮುನ್ನುಡಿ ಬರೆಯಲಿದೆ ಎನ್ನಬಹುದು. ಈ ಎರಡು ದಿಗ್ಗಜ ಸಂಸ್ಥೆಗಳ ಸಂಗಮವು ಐಪಿಎಲ್ ಆರಂಭದಿಂದ ಶುರುವಾದ ಥ್ರಿಲ್ ಹಾಗೂ ರೋಮಾಂಚನಕಾರಿ ಅನುಭವದ ಹೊಸ ಸಾಧ್ಯತೆಗಳಿಗೆ ಮುನ್ನುಡಿ ಬರೆಯುವ ಭರವಸೆ ಮೂಡಿಸಲಿವೆ. ಹೊಂಬಾಳೆ ಫಿಲ್ಮ್ಸ್ ಅತ್ಯಂತ ಪ್ರಮುಖ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ ಹಾಗೂ ಆರ್‌ಸಿಬಿ ಐಪಿಎಲ್‌ನ ಅತ್ಯಂತ ನೆಚ್ಚಿನ ತಂಡವಾಗಿದೆ. ಹಾಗಾಗಿ, ಈ ಸಹಯೋಗ ಅತ್ಯಂತ ರೋಮಾಂಚನಕಾರಿಯಾಗಿರಲಿದ್ದು ಅಭಿಮಾನಿಗಳಿಗೆ ಒಂದು ಮರೆಯಲಾಗದ ಅನುಭವ ನೀಡಲಿದೆ.
ಕುಕ್ಕೆ, ಧರ್ಮಸ್ಥಳಕ್ಕೆ ಯಶ್ ಭೇಟಿ; ಕರುನಾಡಲ್ಲಿ ‘ಕೆಜಿಎಫ್ 2’ ಟಿಕೆಟ್ ಬುಕ್ಕಿಂಗ್ ಆರಂಭ!
ಮಹೇಶ್ ಜತೆ ಮೇಘಾ: ಟಾಲಿವುಡ್ಗೆ ಎಂಟ್ರಿನಾ ಅಥವಾ ಜಾಹೀರಾತಿನ ಶೂಟಿಂಗ್ಗಾ?