2019ರ ಸರ್ಕಾರಿ ರಜಾದಿನಗಳ ಘೋಷಣೆ

ಬೆಂಗಳೂರು: ಬರುವ ವರ್ಷದ ಸರ್ಕಾರಿ ರಜಾದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಒಂದು ರಜೆಗೆ ಒಟ್ಟೊಟ್ಟಿಗೆ ಎರಡು ದಿನ ರಜೆಯ ಮಜ ಅನುಭವಿಸುವ ಅವಕಾಶ ನೀಡಿದೆ.

2019ನೇ ಸಾಲಿನ ಒಟ್ಟು 25 ರಾಜ್ಯ ಸರ್ಕಾರಿ ರಜೆ ದಿನಗಳಲ್ಲಿ 4 ರಜೆ ದಿನಗಳು ಭಾನುವಾರ ಆಗಮಿಸುವ ಮೂಲಕ ಅಷ್ಟರಮಟ್ಟಿಗೆ ಸರ್ಕಾರಿ ಸೇರಿ ಇತರ ನೌಕರರಿಗೆ ನಿರಾಸೆಗೆ ಕಾರಣವಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ವಾಲ್ಮೀಕಿ ಜಯಂತಿ, ನರಕ ಚತುರ್ದಶಿ ಹಾಗೂ ಈದ್ ಮಿಲಾದ್ ಭಾನುವಾರ ಆಗಮಿಸಿವೆ.

ಗಣರಾಜ್ಯೋತ್ಸವ, ಮಹಾ ಶಿವರಾತ್ರಿ, ಚಾಂದ್ರಮಾನ ಯುಗಾದಿ, ಬಕ್ರೀದ್, ಗಣೇಶ ಚತುರ್ಥಿ, ಮಹಾಲಯ ಅಮಾವಾಸ್ಯೆ ರಜೆಗಳು ಶನಿವಾರ ಅಥವಾ ಸೋಮವಾರ ಆಗಮಿಸಿದ್ದು, ಭಾನುವಾರವೂ ಸೇರಿ ಒಟ್ಟೊಟ್ಟಿಗೆ 2 ದಿನ ರಜೆ ಅನುಭವಿಸಬಹುದು.

ಅಲ್ಲದೆ ಮಕರ ಸಂಕ್ರಾಂತಿ, ಗುಡ್ ಫ್ರೖೆಡೇ, ಬಸವೇಶ್ವರ ಜಯಂತಿ, ಮೊಹರಂ ಕೊನೇ ದಿನ, ದೀಪಾವಳಿ, ಕನ್ನಡ ರಾಜ್ಯೋತ್ಸವ, ಕನಕದಾಸ ಜಯಂತಿ ಶುಕ್ರವಾರ ಅಥವಾ ಮಂಗಳವಾರ ಆಗಮಿಸಿದ್ದು ನಡುವಿನ ಶನಿವಾರ ಅಥವಾ ಸೋಮವಾರ ರಜೆ ಹಾಕಿಕೊಂಡರೆ ಒಟ್ಟೊಟ್ಟಿಗೆ ಮೂರು ದಿನ ರಜೆ ಸಿಗಲಿದೆ. ಮಹಾನವಮಿ ಹಾಗೂ ವಿಜಯದಶಮಿ ಕ್ರಮವಾಗಿ ಸೋಮವಾರ ಹಾಗೂ ಮಂಗಳವಾರವಿದ್ದು, ಭಾನುವಾರವೂ ಸೇರಿ ಮೂರು ದಿನ ರಜೆಗೆ ತೆರಳಬಹುದು.

Leave a Reply

Your email address will not be published. Required fields are marked *