More

    ಹೊಳೆನರಸೀಪುರದ ಬನಶಂಕರಿ ದೇವಾಲಯದಲ್ಲಿ ಬನದ ಹುಣ್ಣಿಮೆ ಪೂಜಾ ಮಹೋತ್ಸವ

    ಹೊಳೆನರಸೀಪುರ:ಪಟ್ಟಣದ ನೇಕಾರ ದೇವಾಂಗ ಸಮಾಜದ ಬನಶಂಕರಿ ದೇವಾಲಯದಲ್ಲಿ ಬನದ ಹುಣ್ಣಿಮೆ ಪೂಜಾ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

    ಬನದ ಹುಣ್ಣಿಮೆ ಪ್ರಯುಕ್ತ ಮುಂಜಾನೆ ಹೇಮಾವತಿ ನದಿಯಿಂದ ತೇಜಲ್ ಶೇಖರ್ ಗಂಗಾ ಕಳಶ ಹಾಗೂ ಎಚ್.ಎಂ.ಪವನ್ ವೀರಭದ್ರಸ್ವಾಮಿ ಅವರು ಹಲಗೆಯನ್ನು ಹೊತ್ತು ಜನಪದ ಕಲಾ ತಂಡಗಳ ಪ್ರದರ್ಶನದೊಂದಿಗೆ ಸಾಗಿದರು.

    ಮುಖ್ಯ ರಸ್ತೆಗಳಲ್ಲಿ ಭಕ್ತರು ತೆಂಗಿನಕಾಯಿ ಈಡಗಾಯಿ ಹಾಕಿದರು ಮತ್ತು ಸುಮಂಗಲಿಯರು ಕಳಸಕ್ಕೆ ಆರತಿ ಬೆಳಗಿ ಅಕ್ಷತೆ ಪಡೆದು ಪುನೀತರಾದರು.

    ದೇವಾಂಗ ಬಡಾವಣೆಯ ರಾಮಲಿಂಗ ಚೌಡೇಶ್ವರಿ ದೇವಾಲಯ ರಾಮಮಂದಿರ ಹಾಗೂ ಬನಶಂಕರಿ ದೇವಾಲಯದ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ ನಡೆಸಿದ ನಂತರ ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ ಏರ್ಪಡಿಸಲಾಗಿತ್ತು. ಮಧ್ಯಾಹ್ನ 1 ಗಂಟೆಗೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಂತರ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
    ಪೂಜಾ ಮಹೋತ್ಸವದಲ್ಲಿ ಎಚ್.ಕೆ.ಅನಂತ, ಎಚ್.ಎ.ಗೋವಿಂದರಾಜು, ಎಚ್.ಜಿ.ವೇಣು, ಎ.ಸೋಮಶೇಖರ್, ಎಚ್.ಎಂ.ಈಶ್ವರಯ್ಯ, ಜಯಣ್ಣ ಶಾರದಮ್ಮ, ಡಾ. ಎಚ್.ಎನ್.ರಾಜೇಶ್, ಕವಿತಾ ಶೇಖರ್, ಅಶ್ವಿನಿ ಕೆ.ಎಸ್.ಮೋಹನ್ ಕುಮಾರ್, ಲಕ್ಷ್ಮಿ ಕೃಷ್ಣಪ್ಪ, ಎಚ್.ಎಸ್.ವಸಂತ, ಎಚ್.ಆರ್.ಮೋಹನ್, ಎಚ್.ಬಿ.ಯೋಗೇಶ್, ತ್ರಿವೇಣಿ ಶಂಕರ್, ರೇಷ್ಮಾ ನಾಗೇಂದ್ರ, ಡಿ.ರವಿ, ತಮ್ಮಣ್ಣಶೆಟ್ಟಿ, ಜಯಣ್ಣ, ಶಾರದಮ್ಮ ಹಾಗೂ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts