ಎಚ್.ಡಿ.ರೇವಣ್ಣ, ಪ್ರಜ್ವಲ್‌ರಿಂದ ವಿಶೇಷ ಪೂಜೆ

ಹೊಳೆನರಸೀಪುರ: ಎಚ್.ಡಿ.ದೇವೇಗೌಡರು ಹಾಗೂ ಜಿಲ್ಲೆಯ ಜನರ ಆಶೀರ್ವಾದ ಕುಲದೇವರ ಕೃಪೆಯಿಂದ ಗೆಲುವು ಸಾಧಿಸುತ್ತೇನೆ ಎಂದು ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನುಡಿದರು.


ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ ಅವರೊಂದಿಗೆ ಪೂಜೆ ಸಲ್ಲಿಸಿ ಮಾತನಾಡಿದರು.


ಪ್ರಥಮ ಚುನಾವಣೆಯಾದ್ದರಿಂದ ಭಯವಿತ್ತು. ತಂದೆ, ತಾಯಿ ಮತ್ತು ಸಹೋದರನ ನಿರಂತರ ಪ್ರಚಾರ, ಕಾರ್ಯಕರ್ತರ ಅಭಯ, ಶ್ರಮ ಮತ್ತು ಮತದಾರರ ಒಲವು ನನ್ನನ್ನು ಗೆಲುವಿನತ್ತ ಮುನ್ನಡೆಸುತ್ತಿದೆ ಎಂದರು.


ಹಳೇಕೋಟೆ ಗ್ರಾಮದ ಬೆಟ್ಟದ ಶ್ರೀರಂಗನಾಥಸ್ವಾಮಿ ದೇವಾಲಯ, ಕುಲದೇವರು ಹರದನಹಳ್ಳಿ ಗ್ರಾಮದ ಈಶ್ವರ ದೇವಾಲಯ, ಪಟ್ಟಣದ ಶ್ರೀಲಕ್ಷ್ಮಿನರಸಿಂಹಸ್ವಾಮಿ ದೇವಾಲಯ, ಶ್ರೀರಾಘವೇಂದ್ರಸ್ವಾಮಿ ಮಠ, ಎದುರುಮುಖ ಶ್ರೀಆಂಜನೇಯ ಸ್ವಾಮಿ ದೇವಾಲಯ ಹಾಗೂ ಮಾರಮ್ಮನ ಗುಡಿಯಲ್ಲಿ ಅಭಿಷೇಕ, ವಿಶೇಷ ಪೂಜಾ ಕಾರ್ಯದಲ್ಲಿ ಭಾಗಿಯಾದರು.

Leave a Reply

Your email address will not be published. Required fields are marked *