ಹೊಳೆಆಲೂರ: ಇಲ್ಲಿನ ಯಚ್ಚರೇಶ್ವರ ದೇವಸ್ಥಾನದ ಆವರಣದಲ್ಲಿ ಸೆ. 24ರಂದು ಬೆಳಗ್ಗೆ 9.30ಕ್ಕೆ ವಿಶ್ವಕರ್ಮ ವಿಕಾಸ ಸಂಸ್ಥೆ, ಗಾಯತ್ರಿ ಮಹಿಳಾ ಮಂಡಳ ಹಾಗೂ ವಿಶ್ವಕರ್ಮ ತರುಣ ಸಂಘದ ಸಹಯೋಗದಲ್ಲಿ ವಿಶ್ವಕರ್ಮ ಮಹೋತ್ಸವ, ಶೋಭಾ ಯಾತ್ರೆ, ಶ್ರೇಷ್ಠ ಶಿಲ್ಪಿಗಳು, ವಿಶೇಷ ಸಾಧಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.
ವಿಶ್ವಕರ್ಮ ವಿಕಾಸ ಸಂಸ್ಥೆ ಅಧ್ಯಕ್ಷ ಪಾಂಡುರಂಗ ಪತ್ತಾರ ಧ್ವಜಾರೋಹಣ ನೇರವೇರಿಸುವರು. ಯಚ್ಚರಸ್ವಾಮೀಜಿ ಶೋಭಾ ಯಾತ್ರೆಗೆ ಚಾಲನೆ ನೀಡುವರು. ಯಚ್ಚರೇಶ್ವರ ವಿದ್ಯಾ ಸಂಸ್ಥೆಯ ರಂಗ ಮಂಟಪದಲ್ಲಿ ಬಳಿಕ ನಡೆಯಲಿರುವ ಧಾರ್ಮಿಕ ಸಭೆಯನ್ನು ಶಾಸಕ ಸಿ.ಸಿ.ಪಾಟೀಲ ಉದ್ಘಾಟಿಸುವರು. ಯಚ್ಚರೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಎ.ಎನ್. ಬಡಿಗೇರ, ಬಿ.ಆರ್. ಬಡಿಗೇರ, ಕಾಳೇಶ ಪೋತದಾರ, ಇತರರು ಭಾಗವಹಿಸುವರು.