ಹೊಳಲ್ಕೆರೆ: ಪಟ್ಟಣದ ಗಣಪತಿ ದೇವಾಲಯದಲ್ಲಿ ಮಂಗಳವಾರ ವಿನಾಯಕ ಜಯಂತ್ಯುತ್ಸವ ಸಂಭ್ರಮದಿಂದ ನೆರವೇರಿತು.
ದೇವಸ್ಥಾನವನ್ನು ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಹೊರಭಾಗದಲ್ಲಿ ಆಕರ್ಷಕ ಮಹಾದ್ವಾರ ನಿರ್ಮಿಸಲಾಗಿತ್ತು. ಮುಂಜಾನೆಯಿಂದ ಪ್ರಾಂಗಣದಲ್ಲಿ ಗಣಹೋಮದ ಬಳಿಕ ಪೂರ್ಣಾಹುತಿ ನೆರವೇರಿತು.
ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರಿಗೆ ದೇವಸ್ಥಾನ ಸಮಿತಿ ವತಿಯಿಂದ ಅನ್ನದಾಸೋಹ ಏರ್ಪಡಿಸಲಾಗಿತ್ತು ಎಂದು ದೇಗುಲದ ವ್ಯವಸ್ಥಾಪಕ ರಾಘವೇಂದ್ರ ನಾಯಕ ತಿಳಿಸಿದರು.