ಡೊನೇಷನ್ ಹಾವಳಿ ತಡೆಗೆ ಒತ್ತಾಯ

Holalkere, school, private, donation, fee, book
ಹೊಳಲ್ಕೆರೆ: ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಶನಿವಾರ ಬಿಇಒ ಜಗದೀಶ್ವರ್ ಅವರಿಗೆ ಘೇರಾವ್ ಹಾಕಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ಶಾಲಾ ಸೂಚನಾ ಫಲಕದಲ್ಲಿ ಶುಲ್ಕ ವಿವರ ಪ್ರಕಟಿಸಲು ಆದೇಶಿಸುವಂತೆ ಆಗ್ರಹಿಸಿದರು.

ಸರ್ಕಾರಿ ಶಾಲೆಗಳನ್ನು ಮುಚ್ಚಲು ಅವಕಾಶ ಕೊಟ್ಟು ಖಾಸಗಿ ಶಾಲೆಗಳನ್ನು ಉದ್ಧಾರ ಮಾಡುವ ಕ್ರಮ ಸರಿಯಲ್ಲ. ಶುಲ್ಕ ಕಡಿಮೆ ಮಾಡಬೇಕು. ಇಲ್ಲವೆ ಶುಲ್ಕ ಎಷ್ಟೆಂದು ಸೂಚನಾ ಫಲಕದಲ್ಲಿರಬೇಕು.ಸರ್ಕಾರಿ ಶಾಲೆಗಳಲ್ಲಿ ಸಕಾಲಕ್ಕೆ ಪುಸ್ತಕ, ಸಮವಸ್ತ್ರ ನೀಡಬೇಕು ಎಂದು ಮನವಿ ಮಾಡಿದರು.

ಎಸ್ಸೆಸ್ಸೆಲ್ಸಿ ನಂತರ ಮುಂದೇನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಶಿಕ್ಷಣ ಯೋಜನಾಧಿಕಾರಿ ನರಸಿಂಹಪ್ಪ ಪ್ರತಿಭಟನೆಗೆ ಸ್ಪಂದಿಸಿ ಬಿಇಒ ಜಗದೀಶ್ವರ್ ಜತೆ ಚರ್ಚಿಸಿದರು.

ಎಲ್ಲ ಖಾಸಗಿ ಶಾಲೆಗಳ ಸೂಚನಾಫಲಕದಲಿ ಶುಲ್ಕ ವಿವರ ಪ್ರಕಟಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ರೈತ ಮುಖಂಡರಾದ ರಾಮಪ್ಪ, ತಿಪ್ಪೇಸ್ವಾಮಿ, ರಂಗಸ್ವಾಮಿ, ಚಿದಾನಂದಪ್ಪ ಇತರರಿದ್ದರು.

Leave a Reply

Your email address will not be published. Required fields are marked *