ಅಗ್ನಿ ಅವಘಡ ವೇಳೆ ರಕ್ಷಣೆ ಹೇಗೆ

ಹೊಳಲ್ಕೆರೆ: ಶಾಲಾ ಕೊಠಡಿ, ಕಟ್ಟಡದಲ್ಲಿ ಬೆಂಕಿ ಅವಗಡ ಸಂಭವಿಸಿದರೆ ಪಾರಾಗುವ ಜತೆ ಅಪಾಯದಲ್ಲಿ ಸಿಲುಕಿದವರನ್ನು ಹೇಗೆ ರಕ್ಷಿಸಬೇಕು ಎಂಬುದನ್ನು ಅಗ್ನಿಶಾಮಕ ದಳದ ಅಧಿಕಾರಿ ರಮೇಶ್ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿದರು.

ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಅಗ್ನಿ ದುರಂತಗಳಿಂದ ಸಂರಕ್ಷಣೆ ಮಾರ್ಗೋಪಾಯ ಕುರಿತ ಪ್ರಾತ್ಯಕ್ಷಿಕೆ ವೇಳೆ ಮಾತನಾಡಿದರು.

ಅಡುಗೆ ಮನೆಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನಿಂದ ಆಗುವ ಅಪಾಯಗಳ ಎದುರಿಸುವ ಬಗ್ಗೆ ತಿಳಿವಳಿಕೆ ನೀಡಿದರು. 100ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಬೆಂಕಿ ಹರಡದಂತೆ ತಡೆಯುವ, ನಂದಿಸುವ ಮಾಹಿತಿ ಮುಂಜಾಗ್ರತೆ ಕ್ರಮ ತಿಳಿಸಿದರು.

ಎಲ್‌ಐಸಿ ಅಧಿಕಾರಿ ಬಸವರಾಜ್ ಮಾತನಾಡಿ, ಅಗ್ನಿ ದುರಂತದಿಂದ ರಕ್ಷಣೆ ಕುರಿತು ಮಕ್ಕಳಿಗೆ ಮಾಹಿತಿ ನೀಡುವುದು ಉತ್ತಮ. ಸಂಸ್ಥೆ ಇಂತಹ ಕಾರ್ಯಗಳು ನಿರಂತರವಾಗಿರಲಿ ಎಂದು ಆಶಿಸಿದರು.

ಸುಮಿತ್ರ ಅಕ್ಕ ಅಧ್ಯಕ್ಷತೆ ವಹಿಸಿದ್ದರು. ಅಗ್ನಿಶಾಮಕ ಅಧಿಕಾರಿ ಶಿವಾನಂದ್, ಲೋಕೇಶ್, ಜಾದೂಗರ್ ಮೋಹನ್‌ಕುಮಾರ್ ಇತರರಿದ್ದರು.

Leave a Reply

Your email address will not be published. Required fields are marked *