ನೆಮ್ಮದಿಗೆ ಬೇಕು ಋಣಾತ್ಮಕ ಚಿಂತನೆ

ಹೊಳಲ್ಕೆರೆ: ಒಳ್ಳೆಯ ಚಿಂತನೆಯೊಂದಿಗೆ ಬದುಕು ಸಾಗಿಸಿದರೆ ನೆಮ್ಮದಿ ಸಿಗುತ್ತದೆ ಎಂದು ತಾಪಂ ಇಒ ಮಹಾಂತೇಶ್ ಹೇಳಿದರು.

ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವ್ಯಕ್ತಿಯ ಮನಸ್ಸಿನಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಆಲೋಚನೆಗಳು ಪ್ರತಿ ವಿಷಯದಲ್ಲೂ ಮೂಡುತ್ತಿರುತ್ತವೆ. ಋಣಾತ್ಮಕ ಚಿಂತನೆಯಂತೆ ನಡೆದುಕೊಂಡರೆ ಜೀವನ ಸನ್ಮಾರ್ಗದೆಡೆಗೆ ಸಾಗುತ್ತದೆ ಎಂದರು.

ಸಿಡಿಪಿಒ ಲೋಕೇಶ್ ಮಾತನಾಡಿ, ತಾಳ್ಮೆ ಹಾಗೂ ನಂಬಿಕೆಯನ್ನು ಶಕ್ತಿಯಾಗಿಸಿಕೊಂಡು ನಿರಂತರ ಪರಿಶ್ರಮಪಟ್ಟರೆ ಪ್ರಯತ್ನದ ಫಲ ವ್ಯರ್ಥ ಆಗುವುದಿಲ್ಲ. ಯಾವುದೇ ಕೆಲಸ ಮಾಡುವ ಮುನ್ನ ಅಂತಃಶಕ್ತಿ ವೃದ್ಧಿಸಿಕೊಂಡು ಮುಂದುವರಿಯಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ ರುದ್ರಪ್ಪ, ರಾಜಪ್ಪ ಉಪಸ್ಥಿತರಿದ್ದರು.