ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಹೊಳಲ್ಕೆರೆ: ಲೋಕಸಭೆ ಚುನಾವಣೆ ಪರಿಣಾಮ ಶಾಲೆಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ಒದಗಿಸುವುದು ತಡವಾಗಿದೆ ಎಂದು ಬಿಇಒ ಜಗದೀಶ್ವರ್ ತಿಳಿಸಿದರು.

ಪಟ್ಟಣದ ಹೈಟೆಕ್ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಮತ್ತು ಕನ್ನಡ ಶಾಲೆಯಲ್ಲಿ ಶನಿವಾರ ಕಸಬಾ ಹೋಬಳಿಯ 85 ಶಾಲೆಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.

ಮುಖ್ಯಶಿಕ್ಷಕರು ತಮ್ಮ ಶಾಲಾ ವ್ಯಾಪ್ತಿಯ ಹಳ್ಳಿಗಳಲ್ಲಿ ಕಡ್ಡಾಯವಾಗಿ ಶಾಲಾ ದಾಖಲಾತಿ ಆಂದೋಲನ ನಡೆಸಿ ಪಾಲಕರಿಗೆ ಸರ್ಕಾರಿ ಶಾಲೆಯಲ್ಲಿ ದೊರೆವ ಸೌಲಭ್ಯ, ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಶಿಕ್ಷಣ ಸಂಯೋಜಕ ಮಂಜುನಾಥ್, ಸಿಆರ್‌ಪಿಗಳಾದ ಕಾಂತರಾಜ್, ಅಂಬರೀಷ್, ಶಿಕ್ಷಕರಾದ ರುದ್ರಪ್ಪ, ಮಂಜುನಾಥ್, ಜಯಮ್ಮ ಮತ್ತಿತರರಿದ್ದರು.

Leave a Reply

Your email address will not be published. Required fields are marked *