ಜಲ ಜಾಗೃತಿಗೆ ಜೈ ಎಂದ ಶಾಲಾ ಮಕ್ಕಳು

ಹೊಳಲ್ಕೆರೆ: ನೀರಿಲ್ಲದೆ ಜೀವಸಂಕುಲದ ಉಳಿವು ಅಸಾಧ್ಯ ಎಂಬ ತಿಳಿವಳಿಕೆ ಇದ್ದರೂ ಜಲ ಜಾಗೃತಿ ಮೂಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ ಎಂದು ಪ್ರಾಚಾರ್ಯ ದೇವಿರಪ್ಪ ಬೇಸರ ವ್ಯಕ್ತಪಡಿಸಿದರು.

ಸರ್ ಸಿ.ವಿ.ರಾಮನ್ ಇಕೋ ಕ್ಲಬ್‌ನಿಂದ ಪಟ್ಟಣದ ಎಂ.ಎಂ.ಸರ್ಕಾರಿ ಪ್ರೌಢಶಾಲೆ ಯಲ್ಲಿ ಸೋಮವಾರ ಜಲ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ನೀರು ಪ್ರಕೃತಿಯ ಅಮೂಲ್ಯ ಸಂಪತ್ತು. ಮೇಲ್ನೋಟಕ್ಕೆ ಇದು ಯಥೇಚ್ಛವಾಗಿ ಕಂಡರೂ ಬಳಕೆಗೆ ಯೋಗ್ಯವಾದ ನೀರಿನ ಪ್ರಮಾಣ ಕುಸಿಯುತ್ತಿದೆ. ದುರಾಸೆಗೆ ಜಲ ಮೂಲ ನಾಶಪಡಿಸಲಾಗುತ್ತಿದೆ ಎಂದರು.

ಅಗತ್ಯಕ್ಕೆ ತಕ್ಕಷ್ಟು ನೀರಿನ ಬಳಕೆ ತಪ್ಪಲ್ಲ. ಆದರೆ ಅನವಶ್ಯಕ ಪೋಲು ಮಾಡಿದರೆ ಮುಂದಿನ ಪೀಳಿಗೆಗೆ ಮೀಸಲಾದ ಸಂಪತ್ತನ್ನು ಕಸಿದಂತೆ ಎಂದು ಎಚ್ಚರಿಸಿದರು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಲ ಜಾಗೃತಿ ಜಾಥಾ ನಡೆಯಿತು. ನೀರಿಮನ ಮಿತ ಬಳಕೆ ಕುರಿತು ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಉಪನ್ಯಾಸಕರಾದ ಭೂರೇಶ್, ಕರಿಸಿದ್ದಪ್ಪ, ಅಮೃತೇಶ್, ಜಗದೀಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *