ಪರವಾನಗಿ ಪಡೆದು ವಾಹನ ಚಲಾಯಿಸಿ:ಸಿವಿಲ್ ನ್ಯಾಯಾಧೀಶ ನಾಗೇಶ್ ಸಲಹೆ

ಹೊಳಲ್ಕೆರೆ: ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧ ಎಂದು ಅಪರ ಸಿವಿಲ್ ನ್ಯಾಯಾಧೀಶ ಎನ್.ಎ. ನಾಗೇಶ್ ಎಚ್ಚರಿಸಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನೆ ಇಲಾಖೆಯಿಂದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಲವು ವಾಹನ ಚಾಲಕರು ಡಿಎಲ್ ಹೊಂದದೇ ವಾಹನ ಚಾಲನೆ ಮಾಡಿದ್ದು, ಪ್ರಕರಣಗಳಿಂದ ತಿಳಿದು ಬಂದಿದೆ. ಅತಿವೇಗ ಮೃತ್ಯುವಿಗೆ ಆಹ್ವಾನ ನೀಡಿದಂತೆ. ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಅನೇಕರು ತಮ್ಮ ವಾಹನಕ್ಕೆ ವಿಮೆ ಮಾಡಿಸಿರುವುದಿಲ್ಲ. ಅಂತಹ ವಾಹನ ಅಪಘಾತಕ್ಕೀಡಾದರೆ, ವಾಹನ ಮಾಲೀಕರೇ ನಷ್ಟ ಭರ್ತಿ ಮಾಡಬೇಕಾದ ಸ್ಥಿತಿ ಬರುತ್ತದೆ ಎಂದು ತಿಳಿವಳಿಕೆ ನೀಡಿದರು.

ಹಕ್ಕು ಹಾಗೂ ಕರ್ತವ್ಯ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಕರ್ತವ್ಯ ಪೂರ್ಣಗೊಳಿಸುವವರು ಹಕ್ಕು ಪಡೆಯಲು ಅರ್ಹರಾಗಿತ್ತಾರೆ. ಪ್ರತಿಯೊಬ್ಬರೂ ಸಂಚಾರ ನಿಯಮ ಹಾಗೂ ಕಾನೂನು ಪಾಲಿಸಿದರೆ, ಅಪಘಾತ, ಅಹಿತಕರ ಘಟನೆಗಳ ಪ್ರಮಾಣ ಇಳಿಮುಖವಾಗುತ್ತದೆ ಎಂದರು.

ಕಾನೂನುಗಳ ಕುರಿತು ವಕೀಲ ಎಸ್.ವಿಜಯ್ ಉಪನ್ಯಾಸ ನೀಡಿದರು. ವಕೀಲರ ಸಂಘದ ಉಪಾಧ್ಯಕ್ಷ ಆರ್. ಜಗದೀಶ್, ವಕೀಲ ಶಿವಮೂರ್ತಿ, ಪ್ರಾಚಾರ್ಯ ಎಂ.ವಿ. ವಿಶ್ವನಾಥ, ಜೆಟಿಒ ಬಿ.ಸಿ. ರುದ್ರಸ್ವಾಮಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *