ಸಕಾಲದಲ್ಲಿ ಸಾಲ ಮರುಪಾವತಿಸಿ

ಹೊಳಲ್ಕೆರೆ: ಸಕಾಲದಲ್ಲಿ ಸಾಲ ಮರುಪಾವತಿ, ಬೆಳೆ ವಿಮೆ ತೆಗೆದುಕೊಳ್ಳುವುದರಿಂದ ಬೆಳೆ ನಷ್ಟಕ್ಕೆ ಚಿಂತಿಸುವ ಅಗತ್ಯವಿರುವುದಿಲ್ಲ ಎಂದು ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಕಿರಿಯ ಸಮಾಲೋಚಕ ಬಿ.ಎಲ್.ಅಜಿತ್‌ಕುಮಾರ ತಿಳಿಸಿದರು.

ತಾಲೂಕಿನ ಗಿಲಿಕೇನಹಳ್ಳಿ ಗಜಾನನ ಸಭಾ ಮಂಟಪದಲ್ಲಿ ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಸಂಸ್ಥ್ಥೆಯಿಂದ ಮಂಗಳವಾರ ಆಯೋಜಿಸಿದ್ದ ಹಣಕಾಸು ಸಾಕ್ಷರತಾ ಸಪ್ತಾಹದಲ್ಲಿ ಮಾತನಾಡಿದರು.

ಕೃಷಿ ಚಟುವಟಿಕೆಗೆ ಬ್ಯಾಂಕ್‌ನಲ್ಲಿ ವಿವಿಧ ಧನಸಹಾಯ ಸೌಲಭ್ಯಗಳಿವೆ. ಕಿಸಾನ್ ಕ್ರೆಡಿಟ್ ಕಾರ್ಡ್ ಬಳಸಿ ನಗದು ರಹಿತ ವಹಿವಾಟು ಮಾಡುವ ಜತೆ ಲಾಭ ಪಡೆಯಬಹುದು. ಡಿಜಿಟಲ್ ಬ್ಯಾಂಕಿಂಗ್ ಸುರಕ್ಷಿತವಾಗಿದೆ ಎಂದರು.

ಕೇಂದ್ರ ಸರ್ಕಾರದ ಜನಧನ, ಆಟಲ್ ಪಿಂಚಣಿ, ಜೀವನಜ್ಯೋತಿ ಹಾಗೂ ಸುರಕ್ಷಾ ವಿಮೆ ಯೋಜನೆಯ ಪ್ರಯೋಜನ ಪಡೆಯಬಹುದು. ಎಟಿಎಂ ಕಾರ್ಡ್, ಬಿಮಾ ಮತ್ತು ಅಂತರ್ಜಾಲ ಬ್ಯಾಂಕಿಂಗ್ ಮೂಲಕ ನಗದು ರಹಿತ ವಹಿವಾಟು ನಡೆಸಬೇಕು ಎಂದು ತಿಳಿಸಿದರು.
ಕೆಜಿಬಿ ಬ್ಯಾಂಕ್ ವ್ಯವಸ್ಥಾಪಕ ಧನಂಜಯ್ಯ ಶಿವಗಂಗ ಇತರರಿದ್ದರು.

Leave a Reply

Your email address will not be published. Required fields are marked *