ಬುದ್ಧನ ಆದರ್ಶ ಪಾಲನೆ ಅಗತ್ಯ: ದಸಂಸ ರಾಜ್ಯ ಸಂಚಾಲಕ ರಮೇಶ್ ಅನಿಸಿಕೆ

ಹೊಳಲ್ಕೆರೆ: ಗೌತಮ ಬುದ್ಧನ ಜೀವನಾದರ್ಶ ಪಾಲನೆ ಇಂದಿನ ಅಗತ್ಯ ಎಂದು ದಸಂಸ ರಾಜ್ಯ ಸಂಚಾಲಕ ತರೀಕೆರೆ ರಮೇಶ್ ಹೇಳಿದರು.

ಪಟ್ಟಣದ ದಲಿತ ಸಂಘರ್ಷ ಸಮಿತಿ ಕಚೇರಿ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಲ್ಲರನ್ನೂ ಪ್ರೀತಿಸಿ ಎಂದು ಬೌದ್ಧ ಧರ್ಮವನ್ನು ಪ್ರಸಾರ ಮಾಡುತ್ತಾ ಪ್ರಪಂಚ ಸುತ್ತಿದ ಬುದ್ಧ ಮಹಾ ತತ್ವಜ್ಞಾನಿ. ಆತನ ಆದರ್ಶ ಪಾಲನೆ ಯುವ ಪೀಳಿಗೆಗೆ ಅಗತ್ಯ ಎಂದರು.

ಬಸವಣ್ಣ ಸಮಾ ಸಮಾಜ ನಿರ್ಮಾಣಕ್ಕೆ, ಅಂಬೇಡ್ಕರ್ ಶೋಷಣೆಗೊಳದಾವರನ್ನು ಮೇಲಕ್ಕೆ ತರಲು, ಸರ್ವರಿಗೂ ಶಿಕ್ಷಣದ ಭಾಗ್ಯ ಸಿಗಲು ಹೋರಾಡಿದ ಮಹಾತ್ಮರು. ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆ ಅನುಸರಿಸುವರು ಜೀವನದಲ್ಲಿ ಸುಖಮಯವಾಗಿರುತ್ತಾರೆ ಎಂದು ತಿಳಿಸಿದರು.

ದಲಿತರು, ಶೋಷಿತರಿಗೆ ಮತ ಚಲಾಯಿಸುವ ಹಕ್ಕು ನೀಡಿದವರು ಅಂಬೇಡ್ಕರ್. ಈ ಅವಕಾಶವನ್ನು ಯಾವುದೇ ಆಸೆ ಆಮಿಷಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದರು.

ದಸಂಸ ರಾಜ್ಯ ಸಂಚಾಲಕ ಡಿ.ಪಾಂಡುರಂಗಸ್ವಾಮಿ, ಜಿಲ್ಲಾ ಮಹಿಳಾ ನಾಯಕಿ ಎನ್.ಕುಮಾರಿ, ತಾಲೂಕು ಸಂಚಾಲಕರಾದ ಆರ್.ಶಿವಕುಮಾರ್, ಎಲ್.ಮಂಜಪ್ಪ ಇದ್ದರು.

Leave a Reply

Your email address will not be published. Required fields are marked *