ಹೊಳಲ್ಕೆರೆ: ತಾಲೂಕಿನ ಕಂಬದೇವರಹಟ್ಟಿಯಲ್ಲಿ ಸಾಲಬಾಧೆಗೆ ರೈತ ಕೆ.ದಾಸಪ್ಪ (65) ಭಾನುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಅಭಿವೃದ್ಧಿಗೆ ಹೊಳಲ್ಕೆರೆ ಎಸ್‌ಬಿಐ ಬ್ಯಾಂಕ್‌ನಲ್ಲಿ 2.7 ಲಕ್ಷ ರೂ., ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ ಚಿನ್ನಾಭರಣ ಒತ್ತೆಯಿಟ್ಟು 1.1 ಲಕ್ಷ ರೂ., ಕೃಷಿ ಕೆಲಸಕ್ಕೆ ಟ್ರಾೃಕ್ಟರ್ ಖರೀದಿಸಲು ಪೈನಾನ್ಸ್‌ವೊಂದರಲ್ಲಿ 4.5 ಲಕ್ಷ ರೂ. ಸಾಲ ಮಾಡಿದ್ದರು.
ಎರಡು ವರ್ಷ ಸಕಾಲಕ್ಕೆ ಮಳೆ ಇಲ್ಲದೆ ಬೆಳೆ ನಷ್ಟವಾಗಿತ್ತು. ಜತೆಗೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಟ್ರಾೃಕ್ಟರ್ ಮನೆ ಬಳಿ ನಿಂತಿದ್ದು, ಇದರಿಂದ ಸಾಲ ತೀರಿಸಲು ಸಾಧ್ಯವಿಲ್ಲ ಎಂದು ಚಿಂತೆಗೀಡಾಗಿದ್ದರು. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.