ಹೊಳಲ್ಕೆರೆ: ಪ್ರಧಾನಮಂತ್ರಿ ಶ್ರಮಯೋಗಿ ಯೋಜನೆಯಿಂದ ಅಸಂಘಟಿತ ವಲಯದ ಕಾರ್ಮಿಕರು, ಕೃಷಿ ಕಾರ್ಮಿಕರಿಗೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಬಿಜೆಪಿ ಮಾಧ್ಯಮ ಜಿಲ್ಲಾ ವಕ್ತಾರ ದಗ್ಗೆ ಶಿವಪ್ರಕಾಶ್ ಹೇಳಿದರು.
ಕಾರ್ಮಿಕ ಇಲಾಖೆಯಿಂದ ತಾಲೂಕಿನ ಬ್ರಹ್ಮಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನೋಂದಣಿ ಕಾರ್ಯಕ್ರಮದಲ್ಲಿ ಕೃಷಿ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದರು.
ಅನ್ನದಾತರ ಮೇಲೆ ವಿಶೇಷ ಕಾಳಜಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಯೋಜನೆ ಜಾರಿಗೊಳಿಸಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾಮನ್ ಸರ್ವೀಸ್ ಸೆಂಟರ್‌ನ ಸಹಾಯಕ ಅಭಿಲಾಷ್ ಮಾತನಾಡಿ, ಶ್ರಮಯೋಗಿ ಯೋಜನೆಯಡಿ 18ರಿಂದ 40 ವಯಸ್ಸಿನ ಕಾರ್ಮಿಕರು ಪ್ರತಿ ತಿಂಗಳು 55 ರೂಪಾಯಿ ಪಾವತಿಸಿದರೆ 60 ವರ್ಷದ ನಂತರ ಮೂರು ಸಾವಿರ ರೂ.ಪಿಂಚಣಿ ಸಿಗುತ್ತದೆ ಎಂದು ವಿವರಿಸಿದರು.
ಅನುಷ್ಠಾನ ಏಜೆನ್ಸಿಯ ಕಿರಣ್, ಕಾರ್ಮಿಕ ಇಲಾಖೆಯ ತೀರ್ಥಪ್ರಸಾದ್, ಕುಮಾರಪ್ಪ, ಡಿ.ಮಂಜುನಾಥಪ್ಪ, ಲೋಕೇಶ್ವರಪ್ಪ, ಷಣ್ಮಖಯ್ಯ, ಭೂತಣ್ಣ, ಗೌರಮ್ಮ, ಪಾರ್ವತಮ್ಮ, ಶಂಕರಣ್ಣ ಇದ್ದರು.