More

    ರಾಘವೇಂದ್ರ ಶ್ರೀ ಬದುಕಿನ ಕಲೆ ಕಲಿಸಿದ ಸಂತ

    ಹೊಳಲ್ಕೆರೆ: ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ, ವಿದ್ಯಾರ್ಥಿ ದೆಸೆಯಲೇ ಉತ್ತಮ ಬದುಕು ರೂಪಿಸಿಕೊಳ್ಳುವ ಕಲೆ ಕಲಿಸಿಕೊಟ್ಟ ಮಹಾನ್ ಸಂತ ಎಂದು ಸರ್ಕಾರಿ ವಸತಿಯುತ ಪದವಿ ಕಾಲೇಜು ಪ್ರಾಚಾರ್ಯ ಎಸ್.ಪಿ.ರವಿ ಹೇಳಿದರು.

    ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಸೂರುದಾಸ್‌ಜೀ ಅವರ ಪುಣ್ಯಾರಾಧನೆ ಅಂಗವಾಗಿ ಮಲ್ಲಾಡಿಹಳ್ಳಿಯಲ್ಲಿ ನಡೆಯುತ್ತಿರುವ ತಿರುಕನೂರಿನಲ್ಲಿ ರಂಗದಾಸೋಹ ನಾಟಕೋತ್ಸವದ 2ನೇ ದಿನದ ಗುರುವಾರ ರಾತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ನಾವು ವಿದ್ಯಾರ್ಥಿಗಳಾಗಿದ್ದಾಗ ಯಾವುದನ್ನೂ ಬೋಧಿಸದೇ ಅವರು ಮಾಡುವ ಕೆಲಸಗಳಿಂದಲೇ ನಮಗೆ ಶಿಸ್ತು ಕಲಿಸಿಕೊಟ್ಟರು. ಪೂಜ್ಯರ ಸಕ್ರಿಯ ಕಾರ್ಯ ಚಟುವಟಿಕೆ, ಸತ್ಚಾರಿತ್ರದಿಂದಾಗಿ ಮಲ್ಲಾಡಿಹಳ್ಳಿ ಇಷ್ಟೊಂದು ಖ್ಯಾತಿ ಹೊಂದಲು ಸಾಧ್ಯವಾಯಿತು ಎಂದು ಹೇಳಿದರು.

    ದಾವಣಗೆರೆ ಬಿಐಇಟಿ ಕಾಲೇಜಿನ ಡಾ.ಪ್ರಶಾಂತ್ ಕುಮಾರ್ ಮಾತನಾಡಿ, ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಮಲ್ಲಾಡಿಹಳ್ಳಿಯಲ್ಲಿ ರಾಘವೇಂದ್ರ ಸ್ವಾಮೀಜಿ ಅವರು ನನಸು ಮಾಡಿದ್ದಾರೆ ಎಂದು ಬಣ್ಣಿಸಿದರು.

    ಹಿರಿಯ ವಿದ್ಯಾರ್ಥಿ ಎಸ್.ಪಿ.ಕುಬೇರಪ್ಪ ಮಾತನಾಡಿ, ನಮಗೆ ಬದುಕು ಕೊಟ್ಟ ಮಲ್ಲಾಡಿಹಳ್ಳಿ ಸಂಸ್ಥೆ ಉನ್ನತಿಗೆ ನಾವೆಲ್ಲರೂ ಶ್ರಮಿಸೋಣ ಎಂದರು.

    ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಈ ವೇಳೆ ಗೌರವಿಸಲಾಯಿತು. ಸಂಸ್ಥೆ ಕಾರ್ಯದರ್ಶಿ ಎ.ಎಸ್.ಅಶೋಕ್, ವ್ಯವಸ್ಥಾಪಕ ಎಚ್.ಎಸ್.ಸಿದ್ರಾಮಸ್ವಾಮಿ, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಕೆ.ವಿ.ರಾಜಶೇಖರ್, ಉಮೇಶ್, ಜಿ.ಸುದರ್ಶನ್ ಇತರರಿದ್ದರು.

    ಉಪನ್ಯಾಸಕ ಎನ್.ಎಸ್.ರುದ್ರೇಶ್ ಸ್ವಾಗತಿಸಿದರು. ಯೋಗ ತರಬೇತುದಾರ ಎಸ್.ಆರ್.ಸಂತೋಷ್ ಕುಮಾರ್ ನಿರೂಪಿಸಿದರು. ಎಚ್.ಎಂ.ಸೋಮಶೇಖರ್ ವಂದಿಸಿದರು.

    ಶ್ರೀ ಶಿವಮೂರ್ತಿ ಮುರುಘಾ ಶರಣರು ರಚಿಸಿರುವ, ವೈ.ಡಿ. ಬದಾಮಿ ನಿರ್ದೇಶನದ, ಉಮೇಶ್ ಪತ್ತಾರ್ ಸಂಗೀತ ನೀಡಿರುವ ಮಹಾಬೆರಗು ನಾಟಕವನ್ನು ಚಿತ್ರದುರ್ಗದ ಜಮುರಾ ಸುತ್ತಾಟ ಕಲಾವಿದರು ಪ್ರದರ್ಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts