ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಹೊಳಲ್ಕೆರೆ: ಶರಣರ ವಚನಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಕೆ.ನಾಗರಾಜ್ ಹೇಳಿದರು.

ತಾಲೂಕು ಆಡಳಿತದಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವ ಶರಣರ ಹಡಪದ ಅಪ್ಪಣ್ಣ ಜಯಂತ್ಯುತ್ಸವದಲ್ಲಿ ಮಾತನಾಡಿದರು.

12ನೇ ಶತಮಾನದಲ್ಲಿ ಶರಣರು ಸಮ ಸಮಾಜ ನಿರ್ಮಾಣಕ್ಕೆ ವಚನಗಳ ಮೂಲಕ ಮಾರ್ಗದರ್ಶನ ನೀಡಿದ್ದಾರೆ. ಹಡಪದ ಅಪ್ಪಣ ಸಾಮಾಜಿಕ ಬದಲಾವಣೆಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದರು.

ಆಹಾರ ಶಿರಸ್ತೇದಾರ್ ಕುಬೇರಪ್ಪ ಮಾತನಾಡಿ, ಬಸವಣ್ಣನವರ ಆಪ್ತರಾಗಿದ್ದ ಹಡಪದ ಅಪ್ಪಣನವರು ವಚನ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.

ಸವಿತಾ ಸಮಾಜದ ಮುಖಂಡ ಬಿ.ಕೆ.ಜಯಪ್ಪ ಮಾತನಾಡಿದರು. ಮುಖಂಡರಾದ ವೀರಭದ್ರಪ್ಪ, ಶಿವಣ್ಣ, ನಾಗರಾಜ, ಉಮಾಪತಿ, ಹಾಲೇಶ್, ಖಜಾನೆ ಅಧಿಕಾರಿ ಬೈಯಣ್ಣ, ಅರಣ್ಯಾಧಿಕಾರಿ ಬಹುಗುಣ, ರೋಟರಿ ಕ್ಲಬ್ ಅಧ್ಯಕ್ಷ ಜಿ.ಪಿ.ಹರೀಶ್, ಮಾಜಿ ಅಧ್ಯಕ್ಷ ನಾಗರಾಜ್ ರಾವ್ ಇತರರಿದ್ದರು.

Leave a Reply

Your email address will not be published. Required fields are marked *