ಹೊಳಲ್ಕೆರೆ: ಮತವನ್ನು ದಾನ ಮಾಡಬೇಕೆ ಹೊರತು, ಆಮಿಷಗಳಿಗೆ ಮಾರಾಟ ಮಾಡಿದರೆ ಸಂವಿಧಾನದ ಉಲ್ಲಂಘನೆ ಆಗುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ವಿ.ರವಿಕುಮಾರ್ ಎಚ್ಚರಿಸಿದರು.
ತಾಲೂಕು ಚುನಾವಣಾ ಘಟಕದಿಂದ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಹಾಗೂ ಸಂವಿಧಾನದ ಆಶಯ ಈಡೇರಿಸುವ ಹೊಣೆ ಯುವ ಸಮೂಹದ ಮೇಲಿದೆ ಎಂದರು.
70 ವರ್ಷಗಳಿಂದ ಸಜ್ಜನರು, ಸಮರ್ಥ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದೇವೆ ಎಂದು ವಿಷಾದಿಸಿದರು.
ಪ್ರಾಚಾರ್ಯ ಎಸ್.ಸುರೇಶ್ ಅಧ್ಯಕ್ಷತೆವ ಹಿಸಿದ್ದರು. ಅಪರ ನ್ಯಾಯಾಧೀಶ ಎನ್.ಎಸ್.ನಾಗೇಶ್, ವಕೀಲ ಶಾಂತವೀರಪ್ಪ, ತಹಸೀಲ್ದಾರ್ ಕೆ.ನಾಗರಾಜ್, ತಾಪಂ ಇಒ ತಾರಾನಾಥ್, ಪಪಂ ಮುಖ್ಯಾಧಿಕಾರಿ ವಾಸಿಂ, ವಕೀಲರ ಸಂಘದ ಉಪಾಧ್ಯಕ್ಷ ಜಗದೀಶ್, ವಕೀಲ ಸತ್ಯನಾರಾಯಣ, ತಾಲೂಕು ಚುನಾವಣಾ ಉಸ್ತುವಾರಿ ಸನಾಉಲ್ಲಾ ಮುಂತಾದವರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳು ಪಟ್ಟಣದಲ್ಲಿ ಜಾಥಾ ನಡೆಸಿ ಮುಖ್ಯವೃತ್ತದಲ್ಲಿ ಮಾನವ ಸರಪಳಿ ರಚಿಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರೇಮಾ ವಸಂತರಾವ್ ಪವಾರ್ ಅಭಿಯಾನಕ್ಕೆ ಚಾಲನೆ ನೀಡಿದರು. ಪ್ರೊ.ಅಶ್ವಥ್ ಯಾದವ್ ಸ್ವಾಗತಿಸಿದರು. ಪ್ರೊ.ಗಿರೀಶ್ ನಿರೂಪಿಸಿದರು.