ಹೊಳಲ್ಕೆರೆ: ಸರ್ಕಾರಿ ನೌಕರರ ಸಂಘವು ನೌಕರರ ಹಿತ ಕಾಯಲು ಸಿದ್ಧವಿದ್ದು, ಏನೇ ಕುಂದುಕೊರತೆ ಇದ್ದರೂ ಮುಕ್ತವಾಗಿ ಹಂಚಿಕೊಳ್ಳಬೇಕು ಎಂದು ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ತಿಳಿಸಿದರು.
ಪಟ್ಟಣದ ಪ್ರಸನ್ನ ಗಣಪತಿ ದೇವಾಲಯದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಘದ ಸಭೆ ಹಾಗೂ ಪ್ಯಾಕೆಟ್ ಕ್ಯಾಲೆಂಡರ್ ಬಿಡುಗಡೆ ವೇಳೆ ಮಾತನಾಡಿದರು.
ತಮ್ಮದಲ್ಲದ ಕಾರ್ಯಗಳ ಒತ್ತಡ ಹೆಚ್ಚಾಗಿ ವೃತ್ತಿ ನಿಭಾಯಿಸುವುದು ಕಷ್ಟವಾಗಿದೆ. ಮಾನಸಿಕ ಒತ್ತಡದಿಂದ ಅನೇಕರು ನಾನಾ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ನೌಕರರ ಸೇವೆ ದುರುಪಯೋಗಪಡಿಸಿಕೊಳ್ಳದಂತೆ ಸರ್ಕಾರ ಸೂಚಿಸಬೇಕು ಎಂದು ಆಗ್ರಹಿಸಿದರು.
ಕಸಾಪ ಮಾಜಿ ಅಧ್ಯಕ್ಷ ಎಂ.ಜಿ.ವೆಂಕಟೇಶ್, ಸಂಘದ ಪ್ರ.ಕಾರ್ಯದರ್ಶಿ ತಿಪ್ಪೇಶಪ್ಪ, ಉಪಾಧ್ಯಕ್ಷ ಕೆ.ಎಸ್.ಜಯಕುಮಾರ್, ಖಜಾಂಚಿ ಆರ್.ಅಜ್ಜಪ್ಪ, ಕಾರ್ಯಾಧ್ಯಕ್ಷ ಚಂದ್ರಶೇಖರನಾಯ್ಕ, ರವಿಕುಮಾರ್, ಸಿ.ಆರ್.ರಾಜು, ಜಂಟಿ ಕಾರ್ಯದರ್ಶಿ ಆರ್. ಪ್ರಸನ್ನ, ಕೆ.ಲತಾ, ನಿಜಲಿಂಗಪ್ಪ, ಸದಾಶಿವಪ್ಪ, ರಾಜ್ಯ ಸದಸ್ಯ ಎನ್.ಶಿವಮೂರ್ತಿ ಮತ್ತಿತರರಿದ್ದರು.