More

    ಮಕ್ಕಳ ಕಲಿಕೆಗೆ ಬೇಕು ಶಿಕ್ಷಕರ ಸಹಕಾರ

    ಹೊಳಲ್ಕೆರೆ: ಮಕ್ಕಳಿಗೆ ಶಿಕ್ಷಕರ ಪೂರ್ಣ ಸಹಕಾರವಿದ್ದರೆ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ತಾಪಂ ಇಒ ತಾರಾನಾಥ್ ಹೇಳಿದರು.

    ಶಿಕ್ಷಣ ಇಲಾಖೆ, ಪ್ರೌಢಶಾಲೆ ಮುಖ್ಯಶಿಕ್ಷಕರ ಸಂಘದಿಂದ ಪಟ್ಟಣದ ಟಿಪಿಸಿಕೆ ಬಾಲಕಿಯರ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಉತ್ತಮಪಡಿಸುವ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

    ಪರೀಕ್ಷೆಗೆ ಮೊದಲು ಶಿಕ್ಷಕರು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಬೇಕು. ಇದರಿಂದ ಮಕ್ಕಳಿಗೆ ಪರೀಕ್ಷೆ ಭಯ ದೂರಾಗಲು ಸಾಧ್ಯ ಎಂದರು.

    ಕಲಿಕೆ ಬಗ್ಗೆ ಅನಗತ್ಯ ಒತ್ತಡ ಹಾಕಬಾರದು, ಪರಿಶ್ರಮದಿಂದ ಓದಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಪಾಲಕರು ಮತ್ತು ಶಿಕ್ಷಕರು ಸಹಕಾರಿಯಾಗಬೇಕು ಎಂದು ತಿಳಿಸಿದರು.

    ಬಿಇಒ ಜಗದೀಶ್ವರ್ ಮಾತನಾಡಿ, ಗಣಿತ ವಿಜ್ಞಾನ ವಿಷಯಕ್ಕೆ ಹೆಚ್ಚು ಒತ್ತು ನೀಡಿ ಮಕ್ಕಳಿಗೆ ಬೋಧನೆ ಮಾಡಬೇಕು ಎಂದು ಸಲಹೆ ನೀಡಿದರು.

    ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲೇಶಪ್ಪ, ಕಾರ್ಯದರ್ಶಿ ಅಣ್ಣೇಶ್, ಮಂಜುನಾಥ್, ಕೊಟ್ರೇಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts