More

    ಸುಸಜ್ಜಿತ ಆಸ್ಪತ್ರೆ ಶೀಘ್ರ ಜನಸೇವೆಗೆ

    ಹೊಳಲ್ಕೆರೆ: ಬಡ ಜನರ ಅನುಕೂಲಕ್ಕಾಗಿ ಪಟ್ಟಣದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಿದ್ದು, ಶೀಘ್ರವೇ ಜನಸೇವೆಗೆ ಲಭ್ಯವಾಗಲಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

    ಸಾರ್ವಜನಿಕ ಆಸ್ಪತ್ರೆ, ರೋಟರಿ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಹಿಂದುಳಿದ ವರ್ಗ, ಬಡ ಜನರು ಸಕ್ಕರೆ, ಹೃದಯ ರೋಗದಂತಹ ಪ್ರಮುಖ ಕಾಯಿಲೆಗಳಿಗೆ ದೂರದೂರಿನ ಆಸ್ಪತ್ರೆಗೆ ಹೋಗಿ ಸಾವಿರಾರು ರೂ. ವೆಚ್ಚಿಸಬೇಕಿದೆ. ಇದನ್ನು ತಪ್ಪಿಸಲಿಕ್ಕಾಗಿ ಬೆಂಗಳೂರಿನಲ್ಲಿ ಸಿಗುವ ಆರೋಗ್ಯ ಸೇವೆಯನ್ನು ಪಟ್ಟಣದಲ್ಲಿಯೇ ಒದಗಿಸುವ ವ್ಯವಸ್ಥೆ ಮಾಡಲಾಗುವುದು. ಎಲ್ಲ ರೀತಿಯ ಔಷಧ ಜನೌಷಧಿ ಕೇಂದ್ರದಲ್ಲೇ ದೊರೆಯುವಂತೆ ಮಾಡಿ ಜನರ ಖರ್ಚು ಕಡಿಮೆ ಮಾಡಲಾಗುವುದು ಎಂದರು.

    ಈ ಹಿಂದೆ 100 ಬೆಡ್‌ಗೆ ಮೀಸಲಿದ್ದ ಸರ್ಕಾರಿ ಆಸ್ಪತ್ರೆಯನ್ನು ಈಗ 200 ಬೆಡ್‌ಗೆ ಹೆಚ್ಚಿಸಿ ದಿನದ 24 ಗಂಟೆ ಜನರಿಗೆ ಆರೋಗ್ಯ ಸೇವೆ ಸಿಗುವಂತೆ ಮಾಡಲಾಗುವುದು ಎಂದು ತಿಳಿಸಿದರು.

    ಇನ್ನರ್‌ವ್ಹೀಲ್ ಕ್ಲಬ್ ಸದಸ್ಯರಾದ ಸವಿತಾ, ಮಮತಾ, ಜಿಪಂ ಮಾಜಿ ಸದಸ್ಯ ಎಲ್.ಬಿ.ರಾಜಶೇಖರ್, ಪಪಂ ಮುಖ್ಯಾಧಿಕಾರಿ ಎ.ವಾಸೀಂ, ಟಿಎಚ್‌ಒ ಡಾ.ಜಯಸಿಂಹ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಕೃಷ್ಣಮೂರ್ತಿ, ಡಾ.ವಿನಯ್, ಡಾ.ಮುಂಜುನಾಥ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಶೇಖರ್ ನಾಯ್ಕ, ಸಂತೋಷ್, ರೋಟರಿ ಕ್ಲಬ್ ಅಧ್ಯಕ್ಷ ಜಿ.ಪಿ.ಹರೀಶ್, ಎ.ಸಿ.ಗಂಗಾಧರಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts