ಮಕ್ಕಳ ಕೊಂಡೊಯ್ಯುತ್ತಿದ್ದ ಸರಕು ಸಾಗಣೆ ವಾಹನ ವಶ

ಹೊಳಲ್ಕೆರೆ: ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಸರಕು ಸಾಗಣೆ ಆಟೋ ಚಾಲಕನ ವಿರುದ್ಧ ಜಿಲ್ಲಾ ಮಕ್ಕಳಾ ಸಹಾಯವಾಣಿ ಕೇಂದ್ರದವರು ಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿವರ: ಹೊಳಲ್ಕೆರೆಯಿಂದ ಮಲಸಿಂಗನಹಳ್ಳಿ, ಸಿರಪನಹಳ್ಳಿ, ದುಗ್ಗಾವರಕ್ಕೆ ನಿತ್ಯ 45 ಕ್ಕೂ ಅಧಿಕ ಮಕ್ಕಳನ್ನು ಸರಕು ಸಾಗಣೆ ಆಟೋದಲ್ಲಿ ಕರೆದೊಯ್ಯಲಾಗುತ್ತಿತ್ತು.

ಈ ಮಾಹಿತಿ ಮೇರೆಗೆ ಪಟ್ಟಣದ ಹೊರವಲಯದಲ್ಲಿ ಇತ್ತೀಚೆಗೆ ಆಟೋ ತಡೆದ ಕೇಂದ್ರದ ಸಿಬ್ಬಂದಿ, ಅದರಲ್ಲಿದ್ದ 45 ಮಕ್ಕಳನ್ನು ಬೇರೊಂದು ವಾಹನದಲ್ಲಿ ಸುರಕ್ಷಿತವಾಗಿ ಶಾಲೆಗೆ ಕಳಿಸಿಕೊಟ್ಟರು. ನಂತರ ಚಾಲಕ ಸಹಿತ ಆಟೋವನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು.

Leave a Reply

Your email address will not be published. Required fields are marked *