ಹೊಳೆನರಸೀಪುರ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಪ್ರತಿಭಟನೆ ಬುಧವಾರವೂ ನಡೆಯಿತು. ತಾಲೂಕು ಕಚೇರಿ ಮುಂದೆ ಕಳೆದ 10 ದಿನಗಳಿಂದ ನಡೆಯುತ್ತಿದ್ದರೂ ಸರ್ಕಾರ ಸ್ಪಂದಿಸದ ಕಾರಣ ಗ್ರಾಮಾಧಿಕಾರಿಗಳ ಮುಷ್ಕರ ಮುಂದುವರೆದಿದೆ.
ಗ್ರಾಮಾಧಿಕಾರಿಗಳು ಅನಿರ್ದಿಷ್ಟಾವಧಿ ಹೋರಾಟದಿಂದ ಸಾರ್ವಜನಿಕರಿಗೆ, ರೈತರಿಗೆ, ತೀವ್ರ ತೊಂದರೆ ಆಗುತ್ತಿದೆ. ರೈತರು ಕಂದಾಯ ರಸೀದಿ ಪಡೆದು ಬ್ಯಾಂಕ್‌ಗಳಿಗೆ ನೀಡಿ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಜನನ-ಮರಣ ಪ್ರಮಾಣ ಪತ್ರ ಸಿಗುತ್ತಿಲ್ಲ. ಪೌತಿ ಖಾತೆ ಆಗುತ್ತಿಲ್ಲ. ಯಾವುದೇ ಕೆಲಸಗಳು ಆಗದ ಕಾರಣ ಸಾರ್ವಜನಿಕರು, ರೈತರು ಪರದಾಡುವಂತಾಗಿದ್ದಾರೆ. ಮುಷ್ಕರ ಇದೇ ರೀತಿ ಮುಂದುವರೆದರೆ ಸಾರ್ವಜನಿಕರು, ರೈತರು ಬೀದಿಗಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಜನಸ್ಪಂದನಾ ವೇದಿಕೆಯ ಸದಸ್ಯ ಗೋವಿಂದರಾಜ್ ಎಚ್ಚರಿಕೆ ನೀಡಿದ್ದಾರೆ.
TAGGED:HN pura Protest Continue