ಸಚಿವ ಸ್ಥಾನ ಇಲ್ಲದಿದ್ದರೂ ಜನಸೇವೆ ಮಾಡುವ ಅವಕಾಶವಿದೆ: ಎಚ್.ಕೆ.ಪಾಟೀಲ್

ಗದಗ: ಸಚಿವ ಸ್ಥಾನ ಒತ್ತಾಯದ ಮೂಲಕ ಪಡೆಯುವಂಥದ್ದಲ್ಲ. ನನಗೆ ಸಚಿವ ಸ್ಥಾನ ನೀಡುವುದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು. ಸಚಿವ ಸ್ಥಾನ ಸಿಗದೇ ಹೋದರೂ ಜನಸೇವೆ ಮಾಡುವುದಕ್ಕೆ ಜನರು ಅವಕಾಶ ನೀಡಿದ್ದಾರೆ ಎಂದು ಶಾಸಕ ಎಚ್​.ಕೆ.ಪಾಟೀಲ್​ ಹೇಳಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿ ಸಚಿವ ಸ್ಥಾನಕ್ಕಾಗಿ ಒತ್ತಾಯಿಸಿ ಜನಪ್ರತಿನಿಧಿಗಳು ರಾಜೀನಾಮೆ ನೀಡಲು ಮುಂದಾಗಿರುವ ನಿರ್ಧಾರ ಸರಿಯಲ್ಲ. ಪಕ್ಷದ ಹಿತದೃಷ್ಟಿಯಿಂದ ನಗರಸಭೆ ಅಧ್ಯಕ್ಷ, ಜಿಪಂ ಅಧ್ಯಕ್ಷ ಹಾಗೂ ಕಾಂಗ್ರೆಸ್ ಜನಪ್ರತಿನಿಧಿಗಳ ಸಾಮೂಹಿಕ ರಾಜೀನಾಮೆ ಹಿಂಪಡೆಯಲು ಮನವಿ ಮಾಡಿದ್ದೇನೆ ಎಂದರು.

ಗದಗ ಕ್ಷೇತ್ರದ ಮರುಚುನಾವಣೆ ಬಗ್ಗೆ ತಪ್ಪು ಮಾಹಿತಿ ನೀಡಲಾಗುತ್ತಿದ್ದು, ಬಿಜೆಪಿಯ ಕೆಲ ಮುಖಂಡರಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಮರುಚುನಾವಣೆ ಇಲ್ಲ ಅಂತ ಆಯೋಗ ಸ್ಪಷ್ಟಪಡಿಸಿದೆ ಎಂದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *