ಹಿರಿಯೂರು: ಯುವ ಜನತೆ ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಮತ ಚಲಾಯಿಸಿ ದೇಶಕ್ಕೆ ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ದಮಯಂತಿ ಸೋಮಯ್ಯ ಹೇಳಿದರು.
ನಗರದ ವೇದಾವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆಡಳಿತ ಹಾಗೂ ಪಂಚಾಯಿತಿ, ತಾಲೂಕು ಕಾನೂನು ಸೇವಾ ಸಮಿತಿ, ನಗರಸಭೆ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಹಸೀಲ್ದಾರ್ ಜಿ.ಎಚ್.ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶ ಎನ್.ಬಿ.ಶೇಖ್, ಇಒ ಹನುಮಂತಪ್ಪ, ಡಿವೈಎಸ್‌ಪಿ ಎನ್.ರಮೇಶ್, ಪೌರಾಯುಕ್ತ ಶಿವಪ್ರಸಾದ್, ಪ್ರಾಚಾರ್ಯ ಡಿ.ಚಂದ್ರಶೇಖರಪ್ಪ, ಬಿಇಒ ಪಿ.ರಾಮಯ್ಯ, ವಕೀಲರಾದ ಮಹಲಿಂಗಪ್ಪ, ಟಿ.ದೃವಕುಮಾರ್, ಟಿ.ಪಾಂಡುರಂಗಯ್ಯ, ಬಿ.ಕಾಂತರಾಜು ಇತರರಿದ್ದರು.