ಹಿರಿಯೂರಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಹಿರಿಯೂರು: ಜಮ್ಮುಕಾಶ್ಮೀರದಲ್ಲಿ ಗುರುವಾರ ಹುತಾತ್ಮರಾದ ಯೋಧರಿಗೆ ತಾಲೂಕಿನ ವಿವಿಧೆಡೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರವೇ, ವಂದೇಮಾತರಂ ಜಾಗೃತಿ ವೇದಿಕೆ, ಜಯ ಕರ್ನಾಟಕ ಸಂಘಟನೆಗಳು ಶ್ರದ್ಧಾಂಜಲಿ ಸಲ್ಲಿಸಿ, ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದವು.
ಉಗ್ರರಿಗೆ ತಕ್ಕ ಪಾಠ ಕಲಿಸಬೇಕೆಂದು ಎಬಿವಿಪಿ ಸಂಘಟನೆ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ನಗರದ ರಾಜ ಬೀದಿಯಲ್ಲಿ ಮೌನ ಮೆರವಣಿಗೆ ನಡೆಸಿದರು.
ಗುರುವಾರ ಸಂಜೆ ನಗರದ ಗಾಂಧಿ ವೃತ್ತದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು, ನಗರಸಭೆ ಸದಸ್ಯರು ಮೊಂಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ತಾಲೂಕಿನ ಧರ್ಮಪುರ, ಹರಿಯಬ್ಬೆ, ಚಿಲ್ಲಹಳ್ಳಿ, ಜೆ.ಜಿ. ಹಳ್ಳಿ ಇತರೆಡೆ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರಸಭೆ ಸದಸ್ಯರಾದ ಜಿ. ಪ್ರೇಮ್‌ಕುಮಾರ್, ಟಿ. ಚಂದ್ರಶೇಖರ್, ಎಬಿವಿಪಿ ಸಂಘಟನಾ ಕಾರ್ಯದರ್ಶಿ ಎಚ್.ಆರ್. ಯೋಗೇಶ್, ಕರವೇ ಕೃಷ್ಣಮೂರ್ತಿ, ವಂದೇಮಾತರಂ ಸಂಘಟನೆ ಅಧ್ಯಕ್ಷ ಎಂ.ಎಲ್. ಗಿರಿಧರ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಚಮನ್ ಷರೀಫ್, ನಗರ ಪೊಲೀಸ್ ಠಾಣೆ ಪಿಎಸ್‌ಐ ಮಂಜುನಾಥ್, ವಿಶ್ವನಾಥ್, ಮಹಾಸ್ವಾಮಿ, ಅರುಣ್‌ಕುಮಾರ್, ಕೇಶವಮೂರ್ತಿ, ಶಿವಕುಮಾರ್, ಗಿರೀಶ್, ರಘು ಇತರರಿದ್ದರು.