ತಾಲೂಕು ಮಟ್ಟದ ಸ್ಕೌಟ್ಸ್-ಗೈಡ್ಸ್ ರ‌್ಯಾಲಿ

ಹಿರಿಯೂರು: ಸ್ಕೌಟ್ಸ್ ಅಂಡ್ ಗೈಡ್ಸ್‌ನಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹನೆ ಹಾಗೂ ಪರಿಸರ ಪ್ರಜ್ಞೆ ಜಾಗೃತಿಗೊಳ್ಳುತ್ತದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.
ನಗರದ ನೆಹರು ಮೈದಾನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಸ್ಕೌಟ್ಸ್ ಅಂಡ್ ಗೈಡ್ಸ್ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಯುವ ಸಮುದಾಯ ತಮ್ಮ ಜೀವನಕ್ರಮ ಬದಲಾಯಿಸಿಕೊಂಡು ದೇಶದ ಪ್ರಬಲ ಶಕ್ತಿಯಾಗಿ ಹೊಮ್ಮಬೇಕು ಎಂದು ಕರೆ ನೀಡಿದರು.
ದೇಶದ ಭವಿಷ್ಯ ಯುವ ಸಮುದಾಯ ಶಕ್ತಿ ಆಧಾರಿಸಿದೆ. ದಾರಿ ತಪ್ಪುತ್ತಿರುವರನ್ನು ಸರಿದಾರಿಗೆ ತರಲು ಪಾಲಕರು, ಶಿಕ್ಷಕರು ಕಾಳಜಿ ವಹಿಸಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದರು.ಹೇಳಿದರು.
ರಾಷ್ಟ್ರ, ರಾಜ್ಯಮಟ್ಟದ ಪಥ ಸಂಚಲನೆಯಲ್ಲಿ ಪಾಲ್ಗೊಂಡ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ರ‌್ಯಾಲಿಯಲ್ಲಿ ತಾಲೂಕಿನ ವಿವಿಧ ಶಾಲೆಯ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ರೋಟರಿ ಅಧ್ಯಕ್ಷ ಎಂ.ಎಸ್. ರಾಘವೇಂದ್ರ, ಉಪವಿಭಾಗಧಿಕಾರಿ ಶಶಿಕಲಾ ರವಿಶಂಕರ್, ಸುಂದರ್‌ರಾಜ್, ವೆಂಕಟೇಶ್, ತಿಪ್ಪೇಸ್ವಾಮಿ, ಶಿವಾನಂದ್, ಪ್ರಶಾಂತ್, ದೈಹಿಕ ಶಿಕ್ಷಕ ಕಲ್ಲೇಶ್ ಇತರರಿದ್ದರು.