More

    ಅಡುಗೆ ಸಿಬ್ಬಂದಿ ಸೇವೆ ಶ್ಲಾಘನೀಯ

    ಹಿರಿಯೂರು: ಮನೆಗಳಲ್ಲಿ ಎಂಥಹದ್ದೇ ಸಮಸ್ಯೆ, ಒತ್ತಡಗಳಿದ್ದರೂ ಸೇವಾ ಮನೋಭಾವ ಹಾಗೂ ಒಳ್ಳೆಯ ಮನಸ್ಸಿನಿಂದ ಶಾಲೆಗಳಲ್ಲಿ ಮಕ್ಕಳಿಗೆ ಶುಚಿ-ರುಚಿ ಆಹಾರ ತಯಾರಿಸಿ ಉಣಬಡಿಸುತ್ತಿರುವ ಅಡುಗೆ ಸಿಬ್ಬಂದಿ ಕಾರ್ಯ ಶ್ಲಾಘನಾರ್ಹ ಎಂದು ಶಾಸಕಿ ಕೆ.ಪೂರ್ಣಿಮಾ ಹೇಳಿದರು.

    ತಾಪಂ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಗುರುಭವನದಲ್ಲಿ ಶನಿವಾರ ಅಕ್ಷರ ದಾಸೋಹ ಅಡುಗೆ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಬಿಸಿಯೂಟದಲ್ಲಿ ಸ್ವಚ್ಛತೆ ಕಾಪಾಡುವುದು ಮುಖ್ಯ. ಅಡುಗೆ ಸಹಾಯಕಿಯರು ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ನೀಡುವುದರ ಜತೆಗೆ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಬೇಕು. ಬಿಸಿಯೂಟ ತಯಾರಿಕೆಗೆ ತಾಜಾ ತರಕಾರಿ, ಆಹಾರ ಧಾನ್ಯಗಳನ್ನು ಶುಚಿಗೊಳಿಸಿ ಬಳಸಬೇಕೆಂದ ಅವರು, ನಿಮ್ಮ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

    ಬಿಇಒ ಪಿ.ರಾಮಯ್ಯ ಮಾತನಾಡಿ, ಶಾಲೆಗಳಲ್ಲಿ ಅಡುಗೆ ಸಿಬ್ಬಂದಿ-ಶಿಕ್ಷಕರ ನಡುವೆ ಸಮನ್ವಯತೆ ಇರಬೇಕು. ಮಕ್ಕಳಿಗೆ ಶುಚಿ-ರುಚಿಯಾದ ಆಹಾರ ನೀಡಬೇಕು ಎಂದು ತಿಳಿಸಿದರು.

    ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಲ್.ನಾಗರಾಜಾಚಾರಿ, ಅಕ್ಷರ ದಾಸೋಹ ಕಾರ್ಯಕ್ರಮ ಅನುಷ್ಠಾನ ಕುರಿತು ಮಾಹಿತಿ ನೀಡಿದರು.

    ಡಾ.ನಂದಿನಿ, ಕಾರ್ಮಿಕ ಇಲಾಖೆ ಅಧಿಕಾರಿ ರೆಹಮಾನ್, ಅಗ್ನಿಶಾಮಕ ದಳದ ಜಿ.ಮಹಲಿಂಗಪ್ಪ, ಬಿ.ಆರ್.ಪಿ.ಶ್ರೀನಿವಾಸ್, ಇಸಿಒ ಶಶಿಧರ್, ಪ್ರಾ.ಶಾ.ಶಿ. ಸಂಘದ ಜಿಲ್ಲಾಧ್ಯಕ್ಷ ಸಿ.ಶಿವಾನಂದ, ತಾ.ಅಧ್ಯಕ್ಷ ಹನುಮಂತರೆಡ್ಡಿ, ಚಂದ್ರಣ್ಣ, ಬಿ.ರಮೇಶ್, ಮಂಜುನಾಥ್, ಅಡುಗೆ ಸಹಾಯಕಿಯರ ಸಂಘದ ನಿಂಗಮ್ಮ, ಕರಿಯಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts