ಹರಿಶ್ಚಂದ್ರ ಘಾಟ್‌ನಲ್ಲಿ ಮೂಲ ಸೌಲಭ್ಯ ಕೊರತೆ

ಹಿರಿಯೂರು: ಇಲ್ಲಿನ ಹರಿಶ್ಚಂದ್ರ ಘಾಟ್‌ಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಸ್ಥಳೀಯರು ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಮನೆ ಹಕ್ಕುಪತ್ರ ವಿತರಣೆ, ಕುಡಿವ ನೀರು ಪೂರೈಕೆ, ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ಬಡವರ ಗುಡಿಸಲು ನಿರ್ಮಾಣದ ಜಾಗ ಅತಿಕ್ರಮಣ, ಒಂದೇ ಕುಟುಂಬದ ಐದಾರು ಜನರಿಗೆ ಹಕ್ಕುಪತ್ರ ವಿತರಣೆ ಹೀಗೆ ಅನೇಕ ವಿಚಾರಗಳಲ್ಲಿ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಕೂಡಲೇ ಈ ತಾರತಮ್ಯ ಸರಿಪಡಿಸಬೇಕೆಂದು ಒತ್ತಾಯಿಸಿದರು.

ನಗರಸಭೆ ಆಯುಕ್ತ ಎಚ್. ಮಹಾಂತೇಶ್ ಹರಿಶ್ಚಂದ್ರ ಘಾಟ್‌ಗೆ ಭೇಟಿ ನೀಡಿ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ತುರ್ತು ಕುಡಿವ ನೀರು ಪೂರೈಕೆ, ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ದಲಿತ ಸೇನೆ ಜಿಲ್ಲಾಧ್ಯಕ್ಷ ಎನ್. ರವಿಕುಮಾರ್, ತಾಲೂಕಾಧ್ಯಕ್ಷ ಟಿ. ಚಂದ್ರಪ್ಪ, ಓಬಳೇಶ್, ಶೇಖ್ ಬುಡೇನ್ ಸಾಬ್, ಮಂಜುಳಾ, ಕರಿಯಮ್ಮ, ತಾಜ್, ಸರಸ್ವತಿ, ಪುಷ್ಪಾ, ಪದ್ಮಾ ಇತರರಿದ್ದರು.