ವಿವಿ ಪುರ ಶಾಲೆಯಲ್ಲಿ ಯೋಗ ಪ್ರದರ್ಶನ


ಹಿರಿಯೂರು: ತಾಲೂಕಿನ ವಿ.ವಿ.ಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಯೋಗ ದಿನ ಆಚರಿಸಲಾಯಿತು.

ಮುಖ್ಯಶಿಕ್ಷಕಿ ಎಂ.ಶಿವಲಿಂಗಮ್ಮ ಮಾತನಾಡಿ, ಪ್ರತಿಯೊಬ್ಬರು ನಿತ್ಯ ವ್ಯಾಯಾಮ ಮಾಡುವುದರಿಂದ ಆರೋಗ್ಯ ಬದುಕು ನಡೆಸಬಹುದು ಎಂದು ತಿಳಿಸಿದರು.

ಕ್ಲರ್ಕ್ ಎಂ.ತಿಪ್ಪೇಸ್ವಾಮಿ ಮಾತನಾಡಿ, ಒತ್ತಡದ ಬದುಕು, ಆಧುನೀಕರದಿಂದ ಮನುಷ್ಯ ದೈಹಿಕ ಶ್ರಮದಿಂದ ದೂರವಾಗಿದ್ದು, ಇದರಿಂದ ಅನೇಕ ಖಾಯಿಲೆಗಳಿಂದ ಬಳಲುವಂತೆ ಆಗಿದೆ. ಇದಕ್ಕೆ ಪರಿಹಾರವಾಗಿ ಯೋಗ, ಧ್ಯಾಯ, ನಡಿಗೆ, ಲಘು ವ್ಯಾಯಾಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಕ್ಷಕರಾದ ಹನುಮಂತಪ್ಪ, ಶಂಕರ್, ಶಿವಣ್ಣ, ಸುನೀತಾ, ಸೈಯಿದಾಬಾನು, ಹೇಮರಾಜ್ ಇತರರು ಉಪಸ್ಥಿತರಿದ್ದರು.