ಹಿರಿಯೂರಲ್ಲಿ ಬಿಜೆಪಿ ಪ್ರಚಾರ

ಹಿರಿಯೂರು: ಪ್ರಧಾನಿ ನರೇಂದ್ರ ಮೋದಿ ಅಲೆ, ಕ್ಷೇತ್ರದಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ನಗರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು 18ನೇ ವಾರ್ಡ್ ಅಭ್ಯರ್ಥಿ ಜಿ.ಪ್ರೇಮ್‌ಕುಮಾರ್ ಹೇಳಿದರು.

ನಗರದ 18 ಮತ್ತು 26ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿ ಮಾತನಾಡಿ, ಜಿಲ್ಲೆಯಲ್ಲಿ ವಿಧಾನಸಭೆ ಮತ್ತು ಲೋಸಕಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದ್ದು, ಸ್ಥಳೀಯ ಚುನಾವಣೆಯಲ್ಲೂ ಈ ಗೆಲುವು ಮರುಕಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

26ನೇ ವಾರ್ಡ್ ಅಭ್ಯರ್ಥಿ ಬಿ.ಎನ್.ಪುಷ್ಪಾ ಪರ ನೂರಾರು ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚಿಸಿದರು.
ಮುಖಂಡರಾದ ರಾಧಮ್ಮ, ಪಾವನ, ಸೋಮಶೇಖರ್, ರಾಜಪ್ಪ, ರವಿ, ರಂಗಪ್ಪ, ವಿಜಯಕುಮಾರಿ, ಲಲಿತಮ್ಮ, ಜಯಮ್ಮ ಇತರರಿದ್ದರು.

Leave a Reply

Your email address will not be published. Required fields are marked *