20.3 C
Bangalore
Sunday, December 15, 2019

ಹಿರಿಯೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ

Latest News

ವಿಶ್ವಸುಂದರಿ ವಿಜೇತೆಗೆ ಕೊನೆಯ ಪ್ರಶ್ನೋತ್ತರ ಸುತ್ತಿನಲ್ಲಿ ಕೇಳಿದ ಪ್ರಶ್ನೆಗಾಳವುವು? ಜಮೈಕಾ ಬ್ಯೂಟಿಯ ಉತ್ತರ ಹೇಗಿತ್ತು?

ಲಂಡನ್​: 2019ನೇ ಸಾಲಿನ ವಿಶ್ವಸುಂದರಿ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತೆಯಾಗುವ ಮೂಲಕ ಜಮೈಕಾದ ಟೋನಿ ಅನ್​ ಸಿಂಗ್​ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸ್ಪರ್ಧೆಯ ಕೊನೆಯ ಪ್ರಶ್ನೋತ್ತರ...

ಶಿವಸೇನೆ ಕೈಯಲ್ಲಿರುವ ಗೃಹ ಇಲಾಖೆ ಮೇಲೆ ಎನ್​ಸಿಪಿ ಕಣ್ಣು; ಅಜಿತ್​ ಪವಾರ್​ಗೆ ಜವಾಬ್ದಾರಿ ವಹಿಸುವ ಪ್ರಯತ್ನ

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್​ ನೇತೃತ್ವದ ಸರ್ಕಾರ ರಚನೆಯಾಗಿದ್ದರೂ ಇನ್ನು ಸಚಿವ ಸಂಪುಟ ರಚನೆಯಾಗಿಲ್ಲ. ಸದ್ಯ ಯಾವ ಪಕ್ಷಗಳಿಗೆ ಯಾವ ಖಾತೆ ಎಂಬುದನ್ನು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ...

ಸ್ಮಾರಕದ ಮೇಲೆ ಕುಳಿತ ಪಾರಿವಾಳದಲ್ಲಿ ನೆಚ್ಚಿನ ನಟ ದಿ.ಅಂಬರೀಶ್​ ಅವರನ್ನು ಕಂಡ ಅಭಿಮಾನಿಗಳು

ಮಂಡ್ಯ: ರೆಬಲ್​ಸ್ಟಾರ್​ ದಿ.ಅಂಬರೀಶ್​ ಅವರ ಸ್ಮಾರಕವನ್ನು ಯಲಿಯೂರು ಗ್ರಾಮದಲ್ಲಿ ಪುತ್ರ ಅಭಿಷೇಕ್​ ಅಂಬರೀಶ್​ ಲೋಕಾರ್ಪಣೆ ಮಾಡಿದರು. ಮಂಡ್ಯ ತಾಲೂಕಿನ ಯಲಿಯೂರು ಗ್ರಾಮದಲ್ಲಿ ಅಭಿಮಾನಿಗಳು ದಿ....

ವಾಣಿಜ್ಯ ಬಾಂಕ್​ಗಳ ನಿಯಮಗಳನ್ನು ಬ್ಯಾಂಕೇತರ ಹಣಕಾಸು ಸಂಸ್ಥೆ, ಸಹಕಾರಿ ಬ್ಯಾಂಕ್​​ಗಳಿಗೂ ವಿಸ್ತರಿಸಲು ಆರ್​ಬಿಐ ಚಿಂತನೆ

ನವದೆಹಲಿ: ವಾಣಿಜ್ಯ ಬಾಂಕ್​ಗಳಲ್ಲಿ ಅಳವಡಿಸಲಾಗಿರುವ ಜಾರಿ ನೀತಿ ಮತ್ತು ಚೌಕಟ್ಟನ್ನು ಬ್ಯಾಂಕೇತರ ಹಣಕಾಸು ಸಂಸ್ಥೆ(ಎನ್​ಬಿಎಫ್​ಸಿ) ಮತ್ತು ಸಹಕಾರಿ ಬ್ಯಾಂಕ್​​ಗಳಿಗೂ ವಿಸ್ತರಿಸಲು ಭಾರತೀಯ ರಿಸರ್ವ್​...

ಕಬ್ಬುಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಮಾತುಕತೆ ವಿಫಲ: ಮಂಗಳವಾರದಿಂದ ಕಾರ್ಖಾನೆಗೆ ಕಬ್ಬು ಪೂರೈಕೆ ಬಂದ್​

ಬಾಗಲಕೋಟೆ: ಕಬ್ಬು ಕಟಾವು ಹಾಗೂ ಸಾಗಣಿಕೆ ವೆಚ್ಚ ಪಾವತಿ ಮಾಡಲು ಜಿಲ್ಲೆಯ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ಸಕ್ಕರೆ...

ಹಿರಿಯೂರು: ‘ವಿವಿ ಸಾಗರ ಜಲಾಶಯದ ಡೆಡ್ ಸ್ಟೋರೇಜ್ ಉಳಿಸಿ; ಶತಮಾನದ ಅಣೆಕಟ್ಟು ರಕ್ಷಿಸಿ’ ಎಂಬ ಘೋಷ ವಾಕ್ಯದೊಂದಿಗೆ ವಾಣಿ ವಿಲಾಸ ಹೋರಾಟ ಸಮಿತಿ ಸೋಮವಾರ ಕರೆಕೊಟ್ಟಿದ್ದ ಹಿರಿಯೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಗ್ಗೆಯಿಂದಲೇ ಬಹುತೇಕ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. 9ಗಂಟೆ ನಂತರ ಸಾರಿಗೆ ಸಂಸ್ಥೆ ಬಸ್ಸುಗಳು ಹೊರಭಾಗದಲ್ಲಿ ಸಂಚರಿಸಿದರು. ಮುಂಜಾಗ್ರತ ಕ್ರಮವಾಗಿ ತಾಲೂಕು ಆಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿತ್ತು.

ಪ್ರವಾಸಿ ಮಂದಿರದಿಂದ ಬೈಕ್‌ರ‌್ಯಾಲಿ ಮೂಲಕ ಹೊರಟ ಪ್ರತಿಭಟನಕಾರರು, ಚಳ್ಳಕೆರೆ ರಸ್ತೆಯಲ್ಲಿ ಸಾಗಿ ಬೆಸ್ಕಾಂ ಹಾಗೂ ಕೃಷಿ ಇಲಾಖೆಗಳನ್ನು ಬಂದ್ ಮಾಡಿಸಿದರು. ವೇದಾವತಿ ಬಡಾವಣೆಯ ಜೋಡಿ ರಸ್ತೆಯ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದರು.

ನಂತರ ಮೆರವಣಿಗೆ ಮೂಲಕ ಬಸ್ ನಿಲ್ದಾಣಕ್ಕೆ ಬರುವ ವೇಳೆಗೆ ಕಿರಾಣಿ ಅಂಗಡಿ, ಜವಳಿ ವರ್ತಕರು, ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಬೀದಿಬದಿ ವ್ಯಾಪಾರಿಗಳು, ಹೋಟೆಲ್-ಖಾಸಗಿ ಬಸ್ ಮಾಲೀಕರು, ವಕೀಲರ ಸಂಘ, ವೈದ್ಯರ ಸಂಘ, ನಿವೃತ್ತ ನೌಕರರ ಸಂಘ, ವಂದೇಮಾತರಂ ಜನ ಜಾಗೃತಿ ವೇದಿಕೆ, ಕರವೇ, ಅಂಬೇಡ್ಕರ್ ಸ್ವಾಭಿಮಾನಿ ಸೇನೆ, ರೈತ ಸಂಘದ ಪದಾಧಿಕಾರಿಗಳು ಸೇರ್ಪಡೆಗೊಂಡಿದ್ದರಿಂದ ಮುಖ್ಯ ರಸ್ತೆ ಜನರಿಂದ ಕಿಕ್ಕಿರಿದಿತ್ತು. ಅಂತಿಮವಾಗಿ ಗಾಂಧಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಯಿತು.

ರೈತ ಮುಖಂಡರಾದ ಕಸವನಹಳ್ಳಿ ರಮೇಶ್, ಎಚ್.ಆರ್.ತಿಮ್ಮಯ್ಯ, ಕೆ.ಸಿ.ಹೊರಕೇರಪ್ಪ, ಸಿದ್ದರಾಮಣ್ಣ, ಎಲ್.ನಾರಾಯಣಾಚಾರ್, ಮಣಿ, ವಂದೇಮಾತರಂ ಸಂಘಟನೆಯ ಎಂ.ಎಲ್.ಗಿರಿಧರ್, ಅರುಣ್, ಕರವೇ ಕೃಷ್ಣಮೂರ್ತಿ, ಆಲೂರು ಶಿವಕುಮಾರ್, ವೇದಾ ಶಿವಕುಮಾರ್ ಇತರರು ಪಾಲ್ಗೊಂಡಿದ್ದರು.

ಜೈಲಿಗೆ ಹಾಕಿದ್ರೂ ನೀರು ಬಿಡುವುದಿಲ್ಲ: ನಮ್ಮನ್ನು ಜೈಲಿಗೆ ಹಾಕಿದರು ಸರಿ ಡೆಡ್ ಸ್ಟೋರೇಜ್ ನೀರು ಬಳಸಲು ಬಿಡುವುದಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಜಾರಿಗೆ ಆಗ್ರಹಿಸಿ ಮತ್ತೊಮ್ಮೆ ಅಮರಣಾಂತ ಉಪವಾಸ, ಹೆದ್ದಾರಿ ತಡೆ, ರಾಜಧಾನಿವರೆಗೆ ಪಾದಯಾತ್ರೆ ನಡೆಸೋಣ. ಕರ್ನಾಟಕ ಎಂದರೆ ಕೇವಲ ಮಂಡ್ಯ, ಮೈಸೂರು ಅಲ್ಲ. ಬಯಲು ಸೀಮೆ ರೈತರನ್ನು ನಿರ್ಲಕ್ಷವನ್ನು ಜಿಲ್ಲೆಯ ಜನಪ್ರತಿನಿಧಿಗಳು ಖಂಡಿಸಬೇಕು.

ಇಂದು ಪಂಪ್‌ಹೌಸ್‌ಗೆ ಮುತ್ತಿಗೆ: ವಿವಿ ಸಾಗರ ಜಲಾಶಯಕ್ಕೆ ಮಂಗಳವಾರ ಹೋಗಿ ನೀರು ಪಂಪ್ ಮಾಡುವುದನ್ನು ನಿಲ್ಲಿಸಲಾಗುವುದು. ಜಲಾಶಯ ನೀರಿನ ಸಂಗ್ರಹದ ಬಗ್ಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈಗಿರುವ ನೀರು ಬಳಕೆಗೆ ಯೋಗ್ಯವಿಲ್ಲ. ತೂಬಿನ ಬಳಿ ನೂರಾರು ಪಕ್ಷಿಗಳು, ಜಲಚರಗಳ ಅಸ್ಥಿಪಂಜರಗಳು ತೇಲುತ್ತಿವೆ ಎಂದು ಪ್ರತಿಭಟನಕಾರರು ಆತಂಕ ವ್ಯಕ್ತಪಡಿಸಿದರು.

ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ: ಶ್ರೀ ಶಿವಮೂರ್ತಿ ಮುರುಘಾ ಶರಣರು, ಪಟ್ಟನಾಯಕನಹಳ್ಳಿ ಶ್ರೀ ನಂಜಾವಧೂತ ಸ್ವಾಮೀಜಿ ನೇತೃತ್ವದಲ್ಲಿ ಎಲ್ಲ ಸ್ವಾಮೀಜಿಗಳನ್ನು ಒಗ್ಗೂಡಿಸಿ ಬೆಂಗಳೂರಿಗೆ ಪಾದಯಾತ್ರೆ ಹೊರಟು ಸರ್ಕಾರವನ್ನು ಎಚ್ಚರಿಸಲು ಹೋರಾಟ ರೂಪಿಸಬೇಕು ಎಂಬ ಸಲಹೆಗಳು ಕೇಳಿ ಬಂದವು.

Stay connected

278,754FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...