ಅಂಬೇಡ್ಕರ್ ಎಂದರೆ ಪ್ರಜಾಪ್ರಭುತ್ವ

ಹಿರಿಯೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್ ಎಂದು ಪ್ರಾಚಾರ್ಯ ಬಿ.ಪಿ. ತಿಪ್ಪೇಸ್ವಾಮಿ ಹೇಳಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಪದವಿ ಪೂರ್ವ ಕಾಲೇಜು ಹಾಗೂ ಗೌತಮ್ ಅಕಾಡೆಮಿ ಶಾಲೆ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 128ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಆಸ್ತಿ-ಅಂತಸ್ತು, ಜಾತಿ ತಾರತಾಮ್ಯವಿಲ್ಲದೆ ಪುರುಷನಂತೆ ಮಹಿಳೆಯರಿಗೂ ಮತದಾನ ಹಕ್ಕು ನೀಡಿದ ಕೀರ್ತಿ ಅಂಬೇಡ್ಕರ್‌ಗೆ ಸಲ್ಲುತ್ತದೆ ಎಂದರು.

ಭಾರತದ ಪ್ರಜೆಗಳಿಗೆ ಎಂದು ಮತದಾನದ ಮಹತ್ವ ತಿಳಿಯುತ್ತದೋ ಅಂದು ಭ್ರಷ್ಟಾಚಾರ-ದುರಾಡಳಿತ ನಿರ್ಮೂಲನೆ ಆಗುತ್ತದೆ ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಶಾಂತಮ್ಮ ತಿಪ್ಪೇಸ್ವಾಮಿ, ಉಪನ್ಯಾಸಕರಾದ ಕೆ. ರಂಗಪ್ಪ, ಈ. ನಾಗೇಂದ್ರಪ್ಪ, ಎಚ್.ಆರ್. ಲೋಕೇಶ್, ಶಾಂತಕುಮಾರ್, ಪ್ರಕಾಶ್, ಮಂಜು, ರಜಾಕ್‌ಸಾಬ್, ಮೆಹಬೂಬ್ ಸಾಬ್ ಇತರರಿದ್ದರು.

Leave a Reply

Your email address will not be published. Required fields are marked *