ಕರುಮಾರಿಯಮ್ಮ ವರ್ಧಂತ್ಯುತ್ಸವ

ಹಿರಿಯೂರು: ಇಲ್ಲಿನ ಶ್ರೀ ಕರುಮಾರಿಯಮ್ಮ ದೇವಸ್ಥಾನದಲ್ಲಿ 16ನೇ ವರ್ಧಂತ್ಯುತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ವಿಜೃಂಭಣೆಯಿಂದ ಜರುಗಿದವು.

ರುದ್ರಾಭಿಷೇಕ, ಮಹಾಗಣಪತಿ ಹೋಮ, ಮಹಾಚಂಡಿಕಾ ಹೋಮ, ಶ್ರೀ ಸುಬ್ರಹ್ಮಣ್ಯ, ನವಗ್ರಹ, ಮೃತ್ಯುಂಜಯ, ಪರಿವಾರ ದೇವತಾ ಹೋಮಗಳು, ಸೂರ್ಯನಾರಾಯಣ, ವಿಷ್ಣುದುರ್ಗಾ, ಸಾಂಬಸದಾಶಿವ, ಲಲಿತಾ ಸಹಸ್ರನಾಮ ಹೋಮ, ಉಯ್ಯಲೋತ್ಸವ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನದಾಸೋಹ ಏರ್ಪಡಿಸಲಾಗಿತ್ತು.

ಉತ್ತಮ ಮಳೆಯಾಗಿ ವಿವಿ ಸಾಗರ ಜಲಾಶಯಕ್ಕೆ ನೀರು ಹರಿದು ಬರಲಿ ಎಂದು ಪ್ರಾರ್ಥಿಸಿ ಕರುಮಾರಿಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪುರೋಹಿತರಾದ ಬೆಂಗಳೂರಿನ ಚೇತನ್ ಶರ್ಮ ಮತ್ತು ಸಂಗಡಿಗರು ಚಂಡಿಕಾ ಹೋಮ ನಡೆಸಿಕೊಟ್ಟರು.

ಶ್ರೀ ಕುಮಾರ್ ಸಿಂಗ್ ಸ್ವಾಮೀಜಿ, ದೇವಸ್ಥಾನ ಸೇವಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *